ಕನ್ನಡ ಕಂಗ್ಲಿಷ್ (Kanglish) ಆಗುತ್ತಿದೆಯೇ?
ಇದು ನಾನು ಬರೆದದ್ದಲ್ಲ. ಆದರೆ ಬಹಳ ಸತ್ಯದ ಮಾತೆಂದೆನಿಸಿತು. WhatsAppನಲ್ಲಿ ಕಳುಹಿಸಿದ್ದವರು ಒಬ್ಬರು ಆಪ್ತರು. ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಬಹುದೇ? ಎಂದು ಕೇಳಿದೆ. ಕೃತಿಚೌರ್ಯವೆನಿಸದಿರಲೆಂದು ತಮ್ಮ ಹೆಸರು ಪ್ರಕಟಿಸುತ್ತೇನೆ ಎಂದೆ. ಪ್ರಕಟಿಸಿ ಆದರೆ ನನ್ನ ಹೆಸರು ಬೇಡ ಎಂದರು. ಅವರ ಕಾವ್ಯನಾಮವನ್ನು ಗೌಪ್ಯವಾಗಿಡಲು ಪ್ರಯತ್ನಿಸಿ, ಸ್ವಲ್ಪ ಮಟ್ಟಿಗಿ ಪರಿಶ್ಕರಿಸಿ ಈ ಬ್ಲಾಗನ್ನು ಪ್ರಕಟಿಸುತ್ತಿದ್ದೇನೆ. ಇಲ್ಲಿ ತಿಳಿಸಿರುವ ಅನೇಕ ಅಪರಾಧಗಳನ್ನು ನಾನು ಮಾಡಿರುವೆ / ಮಾಡುತ್ತಿರುವೆ. ತಿದ್ದಿಕೊಳ್ಳುವ ಪ್ರಯತ್ನಗಳೂ ಇವೆ. 🌀💫🌀💫🌀💫🌀💫🌀 ನಮ್ಮ ಮನೆಗಳಲ್ಲಿ ಶುದ್ಧ ಹಾಗೂ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡುವುದನ್ನೇ ನಿಲ್ಲಿಸಿ ಬಿಟ್ಟೆವಾ? ನಾವು ನಮ್ಮ ಮನೆಗಳಲ್ಲಿ ದಿನವಹಿ ನಡೆಸುವ ಸಂಭಾಷಣೆಗಳನ್ನು ಅವಲೋಕಿಸಿದರೆ, ನಾವು ಶುದ್ಧ ಕನ್ನಡದಲ್ಲಿ ಮಾತನಾಡುತ್ತಿಲ್ಲ ಎಂದು ಭಾಸವಾಗುತ್ತದೆ. ನಾನು ಈ ಕೆಳಗೆ ಉಲ್ಲೇಖಿಸಿದ ಕೆಲವೇ ಕೆಲವು ನಮ್ಮ ಸಂಭಾಷಣೆಗಳ ತುಣುಕಗಳನ್ನು ಅವಲೋಕಿಸೋಣ. ಡೋರ್ ಲಾಕ್ ಮಾಡಿಕೊಳ್ಳಿ, ನಾನು ಹೋಗಿ ಬರ್ತೀನಿ. ಡೋರ್ ಲಾಕ್ ಮಾಡಿಕೊ. ನನ್ನ ಕೀಸ್ ಎಲ್ಲಿ? ಇಲ್ಲಿ ಡೋರ್ ಲಾಕ್, ಕೀಸ್ ಪದಗಳಿಗೆ ಬದಲಾಗಿ ಅಚ್ಚು ಕನ್ನಡ ಪದ ಬಳಸಬಹುದಲ್ಲವೇ... ಇಲ್ಲ ನಾವು ಬಳಸುವುದಿಲ್ಲ. ಕಾರಣ? ಒಂದು ಇಪ್ಪತ್ತು, ಇಪ್ಪತ್ತೈದು ವರ್ಷಗಳ ಹಿಂದೆ ಬಾಗಿಲು ಹಾಕ್ಕೊಳ್ಳಿ, ಕದದ ಹಾಕ್ಕೊಳ್ಳಿ, ಬೀಗ ಹಾಕಿ, ಚ...