ಮರಳಿತೋ ಯುಗಾದಿಯು

Click here for audio recitation 🔊 ಹಳೆಯ ಹಳಿತ ಕಹಿಯ ನೆನಪು, ಹೊಸ ಹೊಸೆದ ಸಿಹಿಯ ಹುರುಪು ತಂದಿತು ಯುಗಾದಿಯು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಹಿಂದೆ ತಿರುಗಿ, ಕಳೆದ ನೆನೆದು ಕಲಿತಲ್ಲಿ ಪಾಠವು। ಮುಂದಿನಕೆ ಸಿದ್ದ ಮಾಡಿ ಬಿಚ್ಚಿಟ್ಟ ಗಾಠವು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಕಹಿಯನುಂಡು ಸಿಹಿಯ ಸವೆದ ಸಂಯಮದ ಆಟವು। ಮಾವು ಸೇರಿ ಹುಳಿಯನುಂಡ ಜೀವನದ ಪಾಠವು। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಯೋಜನೆಗಳ ಯೋಚನೆಗಳ ಪಟ್ಟಿ ಸಾಲು ಸಾಲಿಗೆ। ಕಾಲ ಕಾಲಕೆಲ್ಲ ಕಾಲ ಹಾಕಿ ನಡೆವ ನಾವು ಋುತುಚಕ್ರಕೆ। ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥ ಗ್ರಹದ ಗತಿಯನರಿಯಲಾರೆ ಗಿತಿಸುವುದು ಕಾಲ ಖಚಿತವು ಶರಣು ಹೋದೆ ಕಾಲನಡಿಗೆ ಹಸನ ಕಂಡೆ ತುಳಿತದಿಂದ ಉರುಳಿ ಕಾಲ ಸತತವಾಗಿ ಮರಳಿತೋ ಯುಗಾದಿಯು॥