ಗುರು
ತಿಳಿಯದ ತಿಳಿಸಿ ಪೇಳ್ದವನೇನ್ಗುರುವು?
ತಿಳಿದಿಲ್ಲಕೆ ತಿಳಿದಿಲ್ಲವೆಂಬುದು ತಾನರಿಯೆ।
ಕೇಳ್ದವಗೆ ಸರಿಯುತ್ತರ ಕೊಟ್ಟವನೇನ್ ಗುರುವೆ?
ಸರಿಯುತ್ತರ ಹುಡುಕಿಸುವವ ತಾ ಗುರುವು ಸರಿಯೆ॥
ತಿಳಿದಿಲ್ಲದವ ತಿಳಿವಿಲ್ಲವೆಂತಿಳಿಯದವ
ತಿಳಿಹೇಳೆ ಗೋರ್ಕಲ್ಲ ಮೇಲ್ಮಳೆ ಸುರಿದಂತೆ।
ತಿಳಿದಿಲ್ಲದವ ತಾ ತಿಳಿದಿಲ್ಲೆಂದರಿತು ಕೇಳೆ
ತಿಳಿ ಹೇಳೆ ಸಾರ್ಥಕವು ತಿಳಿಯದವಗೆ॥
ತಿಳಿದು ತಿಳಿಯದಂತೆ ನಿದ್ರಿಸಿದವಗೆ
ಎಬ್ಬಿಸಿ ತಿಳಿಯಾಗಿಸುವವ ಗುರುವು।
ತಿಳಿದು ತಿಳಿದಿರುವುದನರಿತವಗೆ ಶರಣು
ಅವನೆ ನಿಜದಿ ಗುರುವು ತಿಳಿಯೊ ಜಾಣ॥
Comments
Post a Comment
What is your opinion please comment here