Posts

Showing posts from October, 2022

ದೀಪ

Image
  Click here for audio recitation ಹಣತೆ ಕತ್ತಲಿನಾ   ಸತ್ಯಕ್ಕೆ   ಬೆಳಕೆಂಬ   ಮಿತ್ಯ ಏನಿಲ್ಲದಿರೆ   ನಿಗೂಡವಾಗಿ   ಇದ್ದದ್ದು ಒಮ್ಮಿಂದೊಮ್ಮೆ   ಏನೋ   ಕರಗಿಸಿ   ಸೋಲಿಸಿ ಸ್ಪಶ್ಟತೆಯ   ಕಲ್ಪಾನಾ   ಲೋಕಕ್ಕೆ   ಕರೆದೊಯ್ವ   ದೀಪ   ನನ್ನ   ಹಣತೆಯ   ದೀಪ ತನ್ನಡಿಗೆ   ಕತ್ತಲಿನ   ಮೆಟ್ಟನ್ನು   ಹಚ್ಚಿ ಸುತ್ತಲಿಗೆ   ಬೆಳಕೆಂಬ   ಭ್ರಮೆಯ   ಚೆಲ್ಲಿ ನೋಡಿದ್ದ   ನಂಬೆಂದು   ತಿಳಿಯಹೇಳುತ ತೋರಿಸಿ   ನಂಬಿಸಿ   ಸಾಂತ್ವನಗೊಳಿಸುವ ಭರವಸೆಯ   ದೀಪ   ನನ್ನ   ಹಣತೆಯ   ದೀಪ ಬರಿಯ   ಮಣ್ಣಿನ   ಬಟ್ಟಲು   ನೀನಾಗಿದ್ದು ಎಣ್ಣೆ   ಬತ್ತಿಯ   ತುಂಬಿ   ಬಳಕುತ್ತ   ಬೆಳಕಿತ್ತು ಮಾಯೆಗೆ   ಸಿಲುಕಿಸಿ   ಸಂತಸವನೀಯುತ್ತ ಹೆದರದಕೆ   ಹೆದರಿಸಿ   ಧೈರ್ಯವನು   ತುಂಬುವಾ ಕಪಟಿ   ನೀನಾದೆ   ನನ್ನ   ಹಣತೆಯ   ದೀಪ ದೀಪವೋ   ನೀ   ನಿರ್ಮಿಸಿದ   ಬೆಳಕಿನಾ   ದ್ವೀಪವೋ ಸುತ್ತಲಿನ   ಕತ್ತಲು   ಕಡಲೋ   ಕಾರ್ಮುಗಿಲೋ ವಿಸ್ತಾರವೇನೋ   ಕಡಲು   ಆ   ಮುಗಿಲಿಗೆ ಬಂಧಿಸಿ   ಬಿಡಗೊಡದೆ ...

ಅಮ್ಮ

Image
  ಅಮ್ಮ ಎಲ್ಲಿ   ಕಳೆದು   ಹೋದವೋ   ಆ   ಕಳೆದ   ದಿನಗಳು ಮರುಕಳಿಸಿ   ಬಾರದೇಕೊ ಆ   ಸಿಹಿಯ   ಕ್ಷಣಗಳು ಅಮ್ಮ   ಎಂಬ   ಕೂಗಿಗಾಕೆ ಓಡನೆ   ಓಡಿ   ಬರುವಳು ಬಂದು   ಅಪ್ಪಿಹಿಡಿದು   ಆಕೆ ತನ್ನೊಲವನು   ತೋರ್ವಳು ಎಣ್ಣೆ   ಶಾಸ್ತ್ರ ,  ಶುಭ   ಹಾರೈಕೆ ಹಬ್ಬ   ಹರಿದಿನಗಳಲ್ಲಿ   ಖಚಿತ ಬಣ್ಣ   ಬಟ್ಟೆ   ತಿನಿಸುಗಳಾ ಪೂರೈಕೆಯಲ್ಲಿ   ಮನ ,  ಕಾಯಕ ನಿದ್ದೆ   ಬರಲೆಂದು   ತಟ್ಟಿ   ಮತ್ತೆ ತಟ್ಟೆಬ್ಬಿಸುತ್ತಿದ್ದಳು ತಲೆಯ   ಕೂದಲ   ಕೆದರಿ   ಮತ್ತೆ ತೀಡಿ   ಬಾಚುತ್ತಿದ್ದಳು ಮೊದಲ   ಗುರುವು ,  ಪಾಠ   ಹೇಳಿ ,  ಮಗ್ಗಿ   ಕಲಿಸುತ್ತಿದ್ದಳು ಹುಸಿಯ   ಕೋಪತೋರಿ ಮತ್ತೆನ್ನ     ರಮಿಸುತ್ತಿದ್ದಳು ಇಟ್ಟ   ರಕ್ಷೆ   ನನಗೆ   ಕವಚ ನಿನ್ನ     ಆಶಿರ್ವಚನವು ನಿನ್ನ   ತುತ್ತು   ತಿಂದ   ನಾನು ನಿನ್ನ   ಋಣಿಯು   ಎಂದಿಗೂ ಅಮ್ಮ   ನೀನಿಲ್ಲವೆಂಬ ಕಹಿಯ   ನೋವು   ಬಿಟ್ಟೆಯಾ ? ನಿನ್ನ   ಕಂದ ,  ನಾನು   ನಲಿಯೆ ಸಂತಸದೊಳು   ಭಾಗಿಯಾಗೆಯಾ ? ಇಂದೇಕೋ   ಕಾಡಿ   ಬಂತು ನಿನ್ನ...

ಮಾತು ನಾಲಿಗೆ

Image
  ಕತ್ತಿ   ಬಾಣಗಳಲ್ಲ ಶೂಲ   ಈಟಿಗಳಲ್ಲ ಬಹು   ಸೂಕ್ಷ್ಮ   ಬಲು   ಹರಿತ ನಾಲಿಗೆಯ   ಚಾವುಟಿಯು ಎಲುಬುಗಳಿಲ್ಲದ   ಅಂಗ ತಿರುಚುವುದು   ಅರಚುವುದು ಮನದ   ಲಗಾಮನು   ಕಿತ್ತಾಶ್ವ ಹುಚ್ಚು   ಕುದುರೆಯ   ಓಟ ಬೇಸರವೊ   ಬೇಜವಾಬ್ದಾರಿಯೋ ನಾ   ತಿಳಿಯೆ   ಇದರ   ಚಪಲತೆಯ ಹರಟುವುದು   ಹರಡುವುದು ಬೇಕ   ಬೇಡಾದ್ದನ್ನೆಲ್ಲ   ಹರುವುದಿದು ತೊಟ್ಟ   ಬಾಣಗಳೆಷ್ಟೂ   ಬಿಟ್ಟ   ದಿಕ್ಕುಗಳೆಷ್ಟೂ ಗುರಿಗೆ   ತಾಗದ   ಅಸ್ತ್ರಗಳಿನ್ನೆಷ್ಟೂ ಗುರಿತಾಗಿ   ಹತ್ಯಗೈದ   ಪ್ರಾಣಗಳಿನ್ನೆಶ್ಟೋ . .                  ಕ್ಷಮೆಯ   ಔಷದಿಗಳಿಲ್ಲ ಹೆಪ್ಪುಕಟ್ಟದ   ಸ್ರಾವ ಹರಿವುದು   ಕಾಲ   ಕಾಲದಲಿ ತಡೆಯಲಾಗದ   ಕೆಂಬಣ್ಣ ಜಾಣನ   ಜಾಣತನ ಬೇಕೆಂದಾಗ   ಮಾತು ಅತಿ   ಮೌನ   ಸೌಖ್ಯವು ನಿಯಂತ್ರಿತ   ನಾಲಿಗೆಯು

ಸ್ನೇಹ

Image
Click here for audio recitation 🔊   ರೈಲ್ನಲ್ಲಿ   ಪಯಣ   ಬಹುತಾಸುಗಳದ್ದು ನಾನಿತ್ತ   ನೀವತ್ತ   ಪರಿಚಿತರೇನು   ಅಲ್ಲ ಹಾಗೇ   ಕಾಲಕಳೆಯಲೆಂದು   ಪ್ರಾರಂಭಿಸಿದ್ದು ಉಭಯಕುಶಲೋಪರಿ   ಪರಿ   ಪರಿಯ   ಮಾತುಗಳು ನನ್ನ   ನೀವು ,  ನಿಮ್ಮನು   ನಾನು   ಮತ್ತೆ   ಸಂಧಿಸುವ   ಸಂ ಧರ್ಭವಿಲ್ಲವೆಂದು ನನ್ನ   ಪ್ರಲಾಪಕ್ಕೆ   ಸೈ   ಹೇಳುತ್ತ   ಬಂದ   ಹಾಸ್ಯ   ಕಲಾಪ ಹೌದು   ನಾವಿಬ್ಬರೂ   ಸ್ನೇಹಿತರು   ಈ   ಪಯಣದಲಿ   ಒಬ್ಬರಿಗೊಬ್ಬ   ಹಿತಚಿಂತಕರು   ವ್ಯಾವಹಾರಿಕವಾಯಿತೆ   ನಮ್ಮೀ   ಸ್ನೇಹ ? ಶಾಲೆಯಲ್ಲಿ   ಒಡನಾಡಿದವರು   ಬಹುವರುಷಗಳದ್ದು ನನ್ನ   ಪಕ್ಕ   ನೀನು   ನಿನ್ನ   ಪಕ್ಕ   ನಾನು   ಚಡ್ಡೀದೋಸ್ತುಗಳು ಸಹಪಾಟಿಯಾಗಿ   ಆಟೋಟಗಳಲ್ಲಿ   ಪೈಪೋಟಿಯಾಗಿ ಗೆದ್ದರೂ   ಸೋತಂತೆ ,  ಸೋತರೂ   ಗೆದ್ದಂತಾಡಿದವರು ನನ್ನನೀ   ನಿನ್ನನು   ನಾನು   ಅಗಲುವುದಿಲ್ಲವೆಂದು   ಆಣೆಯಿಟ್ಟವರು ಹೌದು   ನಾವಿಬ್ಬರೂ   ಸ್ನೇಹಿತರು ಆಟ   ಪಾಠಗಳಲ್ಲಿ   ಸಮಭಾಗಿಗಳು   ವ್ಯಾವಹಾರಿಕವಾಯಿತೆ   ನಮ್ಮೀ ...