ದೋಸೆ

 



ದೋಸೆ

ಅಹಾ ದೋಸೆ ಬಿಸಿಬಿಸಿ ದೊಸೆ

ಕಾದ ಹಂಚಿಗೆ ಚುಸ್ಸೆಂದೆನುತ

ಹರಡಿ ಹರಡಿಸಿ ವುತ್ತಾಕಾರದಿ

ವಿಧ ವಿಧವಾಗಿ ಅವತರಿಸುವ

ಅಹಾ ದೋಸೆ ಬಿಸಿಬಿಸಿ ದೋಸೆ


ಏನಿಲದಿದ್ದರೆ ಅದು ಖಾಲೀ ದೋಸೆ

ಪಲ್ಯದ ಜೊತೆಗದು ಮಸಾಲ ದೋಸೆ

ಬೆಣ್ಣೆ ಹಾಕಿದರೆ ದಾವಣಗೆರೆಯು

ಮೂರಾದರೆ ಅದು ಸೆಟ್ಟಾಗುವುದು

ಅಹಾ ದೋಸೆ ಬಿಸಿಬಿಸಿ ದೋಸೆ


ಕಾಗದದಂತಹ ಪೇಪರ್ದೋಸೆ

ಅಲ್ಲಿಲ್ಲಿದ ಪ್ಲೈನು ದೊಸೆ

ಸಾದ ಮಸಾಲೆಬೆಣ್ಣೆ ಮಸಾಲೆ

ರುಚಿಕರ ನಮ್ಮ ಮೈಸೂರು ಮಸಾಲೆ

ಅಹಾ ದೋಸೆ ಬಿಸಿಬಿಸಿ ದೋಸೆ


ರವೆಯಲ್ಲಾದರೆ ರವೇ ಮಸಾಲೆ

ಕಾಳುಗಳಿದ್ದರೆ ಪೆಸರಟ್ಟದುವು

ತೆಮಿಳಗರು ಅದ ಅಡೈ ಎನ್ನುವರು

ಭಾಷೆಗಳನೇಕ ವಿಧ ವಿಧ ತರಹ 

ಅಹಾ ದೋಸೆ ಬಿಸಿಬಿಸಿ ದೋಸೆ


ಮನೆಯಲಿ ರುಬ್ಬಲಿ ಹಿಟ್ಟದು ಕಲಸಲಿ

ನೇರ ಉಪಯೋಗದ readymix ಇರಲಿ

ID MTRರೋ  ಮನೆಗದು ಬರಲಿ

ಮೆಂತ್ಯವೊ ಕಡಲೆಯೊ ಅವಲಕ್ಕಿಯೂ ಸೇರಲಿ

ಅಹಾ ದೋಸೆ ಬಿಸಿಬಿಸಿ ದೋಸೆ


ಕಾಯಿತುರಿಯ ಬಿಳಿ ತೆಂಗಿನ ಚಟ್ನಿ

ಕೆಂಬಣ್ಣದ ಟೊಮೇಟೊ ಚಟ್ನಿ

ಪುದೀನ ಕೊತ್ತಮ್ಮರಿಯ ಹಸಿರಾದರು ಸರಿಯೆ

ಬಣ್ಣ ಬಣ್ಣದ ಚಟ್ನಿ ದೋಸೆಗೆ ಅಣಿಯೆ

ಅಹಾ ದೋಸೆ ಬಿಸಿಬಿಸಿ ದೋಸೆ


ಏನಿಲ್ಲದಿರೆ ಇದೆ ಚಟ್ನಿಪುಡಿಯು

ಶೇಂಗಾ ಪುಡಿ ಕರಿಬೇವಿನ ಪುಡಿಯು

ಉಪ್ಪಿನಕಾಯೋ ಮಾವಿನ ತೊಕ್ಕೋ

ಕಡೆಗೆ ಜೇನು ಬೆಲ್ಲ ಜ್ಯಾಮಿನ ಸಿಹಿಯೋ

ಅಹಾ ದೋಸೆ ಬಿಸಿಬಿಸಿ ದೋಸೆ


ಪಿಜ್ಜಾ ಬರಗರ್‌ ಮಾಮ ಮೋಮೋ

ಪೂರಿ ಭಾಜಿ ಮಿಸ್ಸಲ ಪಾವು

ಸಾಧಾರಣ ಜಗಳಕ್ಕಾಗುವ ಉಪ್ಪಿಟ್ಟು

ಇವನೆಲ್ಲವ ಜೈಸಿ ನಿಂತಿದೆ ಮೆಟ್ಟು

ಅಹಾ ದೋಸೆ ಬಿಸಿಬಿಸಿ ದೋಸೆ


ದೋಸೆಗೇಕೆನ್ನುವರು ಡೋಸ?

ಕನ್ನಡ್ ಬಾರದ ಉತ್ತರದವರು

ತಪ್ಪಿರಬಹುದು ಉಚ್ಚಾರದಲಿ

ತಿನ್ನಲು ಅವರಿಗೂ ತೃಪ್ತೀಕರವೂ

ಅಹಾ ದೋಸೆ ಬಿಸಿಬಿಸಿ ದೋಸೆ


ಅಗ್ರಪೂಜೆಗೆ ಹೊಟೆಲ್ಲುಗಳನೇಕ

ಮಲ್ಲೇಶ್ವರವೋ ಬಸವನಗುಡಿಯೋ

ಪುರಾತನವಲ್ಲದ ನಿನ್ನೆ ಮೊನ್ನೆಯವೋ

ಇಡುವರು ಆಣೆ ಬಿಡುವರು ಪ್ರಾಣ

ಇಲ್ಲಿ ತಿಂದನುಭವಿಸುವವ ಜಾಣ


  • ನಾ ಶ್ರೀ ಮೋ

Comments

Popular posts from this blog

Those Three months in 2022

Those months after ...

My Brother’s friend

A trip down the memory lane

Deepavali Reflections: King Bali and the Spirit of Righteousness

Sixty - retired?

Being bald

My first long Motorbike ride

A Lesson learnt in a bike ride

REML Himalayan Bike