ಯುವಕ
🔊Audio recitation of the Poem ಬೊಕ್ಕ ತಲೆ ಬಿಳಿಯ ಮೀಸೆ ಸೋತ ಚರ್ಮ ನೋಡೆ ಮುದುಕ ನೋಡಿದವರಿಗೆಲ್ಲ ತಾತ ಮಾಮ ಇವನು ವಯಸ್ಸಿನಲ್ಲಿ ವಯೋವೃದ್ಧ ಮಿಂಚು ಕಣ್ಣು ಬಿಚ್ಚುನಗುವು ಪಾದರಸ ನಡಿಗೆ ಹುರುಪು ತುಂಬ ಒಡೆನಾಡಿದವರಿಗೆಲ್ಲ ಅಣ್ಣ ಗೆಳೆಯ ಇವನು ಮನದಲಿ ತರುಣ ಯುವಕ ಮುಗ್ಧ ಮನಸು ತುಂಟತನವು ಇವನಲಿಹುದು ಹವ್ಯಾಸ ಬಗೆಯು ವಾರ ಕೊನೆಗೆ ಬೈಕ್ ರೈಡು ಬೇಕು ತೋಟವೇನು ಆಟೋಟವೇನು ಟ್ರೆಕ್ಕೆಂದು ಶಿಖರಗಳಿಗೆ ಓಡುವವನು ಹಾಸ್ಯ ನಟನೆ ಹಾಡು ಹಾಸೆ ಕವನ ಮನನ ಅದರೆಲ್ಲ ಆಸೆ ಚಿಕ್ಕ ಮಗುವು ನುಡಿದು ನಲಿವ ಕಪಟವಿಲ್ಲ ತೆರೆದ ಹೃದಯ ಎಲ್ಲರೋಡನೆ ಇವನು ಬೆರೆವ ಇವನು ಕೂಡ ಪೆಟ್ಟು ತಿಂದ ಜೀವ ನೋಡಿ ಬಂದಿಹ ನೋವು ನಲಿವ ತಿಂದಿರುವನು ಇವನು ಬೆಲ್ಲ ಬೇವ ದುಃಖ ಭಯ ದುಗುಡವಿಹುದು ಎಲ್ಲರಂತವಿನೂ ನೋಡ ಬಿದ್ದು ಎದ್ದಿಹ, ಎದ್ದು ಬಿದ್ದಿಹ ಮೈಯ ಕೋಡವಿ ನಕ್ಕು ನಡೆದಿಹ ಗಾಯಗಳಿಹವು ಹಲವು ಮೈಮನ ಕುರುಹು ಅವಿತಿದೆ ಮುಸುಕಿ ಹುದುಗಿದೆ ತೋರಲಾರನು ಅವನೆಲ್ಲರೆದುರಿಗೆ ಹೂತು ಅವಗಳ ಮೇಲೆ ತಾನು ನಗೆಯ ಮುಖದ ಗೋರಿ ಕಟ್ಟಿಹ ಚರಮ ಶ್ಲೋಕ ಬರೆದು ಹಾಡಿದ ಹೂವ ಗಿಡವನು ಮೇಲೆ ನೆಟ್ಟಿಹ ಹೂವ ನೋಡಿ ಇಂದು ನಲಿದಿಹ ಮುದುಕನಲ್ಲ ಯುವಕನಿವನು ಯುವಕನಲ್ಲ ಹಸುಳೆ ಇವನು ಘಂಟೆ ಮುಳ್ಳಿನ ಮೇಲೆ ಕುಣಿವನು ಕಾಲ ನಿಂತಿದೆ ಇವನಿಗಿಂದು ಮುಂದೆ ಜಾಣ ನೆನೆವರು ಧೀರ ಇವ ಸರದಾರನೆಂದು ⁃ ನಾ ಶ್ರೀ ಮೋ