Posts

Showing posts from February, 2025

Rise and fall of body and soul.

Image
My falls during Paragliding and Motorbiking When I was on my first ever long motorbike ride ( https://nsmcyberdude-thoughts.blogspot.com/2025/01/my-first-long-motorbike-ride.html ), I came across Mr.Anil Nair. He was our “Lead” and the captain of the group. On almost the last evening of the ride, he mentioned that he had written and published a book called   License to fall .  I had read something on similar lines but with a different approach to the subject from my friend, literary guru and a prolific writer, Dr. D V Guruprasad. I.P.S    B.Sc. fail, I.P.S. Pass . I remember telling someone that I hadn’t come across a person who learnt how to ride a bicycle without falling even once. That got me thinking. I myself have fallen literally and metaphorically many a time and have always got up, dusted myself and moved on. Somehow I have cultivated an attitude that falling, getting up, correcting myself and moving on, is a part of life. Neither is falling an embarrass...

ಸಮಯದ ಯಂತ್ರ

Image
  Click here for audio recitation 🔊 ಕಾಲದೊಳು ಮುನ್ನುಗ್ಗಿ  ಹಿಗ್ಗಿ   ಮುಂದೇನಾಗುವುದದನಾನರಿಯೆ| ಅದಾವ ಯಂತ್ರ, ತಂತ್ರಕೆ ಮಣಿದು  ಏನ ತಿಳಿಸುವುದೊ ನಾ ತಿಳಿಯೆ| ಕಾಲದ ಬಿಲದಲಿ ನುಗ್ಗಿ  ಹಿಂತಿರುಗಿ  ನಡೆದ ಕೆಲ ಘಟನಾವಳಿಯ ನಾನರಸಿ| ನೋಡಿದೆ ಹಲ ಉಲ್ಲಾಸ ಫಟನೆಗಳ  ಕೆಲ ಮರೆತ ಕಹಿ ಸತ್ಯಗಳ॥ ಪಶ್ಚಾತ್ತಾಪ, ಧನ್ಯತೆ, ಉದ್ವೇಗ,  ನಗೆ, ಜಿಗುಪ್ಸೆ, ಕೋಪಗಳ| ಹೀಗೆ ಹತ್ತಾರು ಮಾನಸಿಕ  ಅಂತರಾತ್ಮ ಅನುಭವವು| ಗತಿಸಿದಕೇನು ಚಿಂತೆ ಚಿತೆಯೇರಿತಲ್ಲ ಕಾಲಾಗ್ನಿಯಲಿ| ಮತ್ತೇಕೆ ಆ ಭೂತಗಳು  ಕಾಡುತಿವೆ ನನ್ನನ್ನಿಂದು? ಹಿಂದಿನದಿಂ ಪಾಠ ಕಲಿಯುವಾಸೆ,  ತಪ್ಪ ಸರಿಪಡಿಸುವಾಸೆ। ಚಿಕ್ಕವನಾಗುವಾಸೆ, ಅಮ್ಮನ  ತೊಡೆಯಮೇಲ್ಮಲಗುವಾಸೆ॥ ಗಳೆಯನೊಂದಿಗೆ ಓಡುವಾಸೆ,  ಶಾಲೆಗಗೆ ಹೋಗುವಾಸೆ ಕೈಗೂಡದಾಸೆಗಳ ನೆನಪಿನಂಗಳದಿ  ನಾನಿಂದು  ಹೊರ ಓಡಿ ಬಂದೆ॥ ಕಂಡೆ ನನ್ನ ಕಾಲ ಯಂತ್ರವ  ಬಲು ಹಳೆಯ ಗೆಳೆಯನಲಿ। ಕೊಂಡೊಯ್ದ ಯೋವನದ  ನಮ್ಮಾ ಹಿಂದಿನ ಕಾಲದಲಿ। ವಿಹರಿಸಿ ಬಂದೆವು ಇಂದಿಗೆ  ಮರುಕಳಿಸಿ ಜೊತೆಯಲ್ಲಿ ಮುಂದೊಂದು ದಿನ ಇಂದಿನ  ದಿನವ ಮೆಲಕುವವ ಜಾಣ॥ - ನಾ ಶ್ರೀ ಮೋ

ಪಯಣ

Image
  Click here for audio recitation 🔊 ಕಾಣದ ಜಾಗವ ಕಾಣ ಹೊರಟಿರುವೆ ಕಂಡರಿತ ಈ ಸ್ಥಳವ ನಾನು ತೊರೆದು| ಕಾಣಬೇಕೇನದನು ಯಾಕೀ ಹಟ ತಿಳಿಯೆ ಸಾಧಿಸುವುದಾದರೇನದರ ಫಲವು? ಹಿತ್ತಿಲಿನಾ ಮುದಿ ಮರವ ನೋಡಿ ಕಲಿತೆನು ನಾನು ಜಢದಿ ನಿಂತಿಹುದೇನು ಅಲ್ಲೆ ತೊಯ್ದಾಡದೆ? ಬೇರ ನೂಕಿಹ ತಾನು ಪಾತಾಳವರಸುತ್ತ ಮೇಲ್ಮೇಲೆ ನಡೆದಿಹನು ಬಾನಿನತ್ತ॥ ನಿಂತಿಹುದೇನು ನೀರು ತಾ ನಿಸ್ಚಲದಿ ಮಡುವಾಗಿ ಜಿಗಿದು ಮುನ್ನುಗ್ಗಿಹುದು ಮುಂದೆ ನಡೆಯೆನ್ನುತ। ಕಣಿವೆ ಜಲಪಾತ ತಾ ಹರಿವ ಪಥದೇನರಿವು? ಧೈರ್ಯದಲಿ ಸಾಗುತಿಹಳು ತಾ ನದಿಯೆನ್ನುತ॥ ಹಕ್ಕಿಯದು ಹಾರುತಿದೆ ತನ್ನ ಗೂಡನು ತೊರೆದು ರಕ್ಕೆಯ ಬಲವಲ್ಲವದು ಆತ್ಮ ವಿಶ್ವಾಸ। ಜೊತೆಯಲ್ಲೊ ಒಮ್ಮೊಮ್ಮೆ ಒಬ್ಬೊಂಟಿಗನಾಗಿ ಹಾರುವಾ ಹಕ್ಕಿಯಿಂಪಾಠ ನಾನು ಕಲಿತೆ॥ ಕಾಣದಕೆ ಹುಡುಕುವುದು, ಅರಿಯದನರಸುವುದು ಹುಚ್ಚಲ್ಲ, ಹಠವಲ್ಲ ಅಲ್ಲೇ ಗುರಿಯ ಕಾಣೋ। ಒಳ ಹೊರಗಿನ ಈ ಇಡಿಯ ಬ್ರಹ್ಮಾಂಡದಲಿ  ಕಾಣದಕೆ ಹವಣಿಸಿದವನೆ ನಿಜ ಜಾಣನವನೋ॥ - ನಾ ಶ್ರೀ ಮೋ