Posts

Theme: Coffee ಕಾಫೀ

Image
🔊 Click here for audio recitation ತ್ರಿಮೂರ್ತಿ ಕಾಫಿ  ಕಾಫೀಂಬ್ರಹ್ಮಮಿದಂ ಸರ್ವ ಸೃಶ್ಠಿಕಾರ್ತಂ। ಸಯೇವ ವಿಷ್ಣುಃ ಮಮ ಪೌಷ್ಟಿಕಾರ್ತಂ। ರುದ್ರಃ ಸಹ ಸರ್ವ ಯೋಚನಾ ನಾಶಣಾರ್ತಂ। ಕಾಫೀತ್ರಯಂ ಪಿಭಾಮಿ ಮಮ ಆನಂದಾರ್ತಂ॥ Coffee is for creation of ideas and a brahma swaroopi It is a nourisher to preserve, protect us like the Maha Vishnu.  Coffee is a stimulant and as a destroyer like lord shiva, killing moroseness and depression.  Coffee is  Trimurti swaroopi as in a Creator, preserver and the destroyer ತ್ರಿವೇಣಿ ಕಾಫಿ (shathaavadhaani Ganesh ಪ್ರೇರಿತ) ಕ್ಷೀರಾಂ ಭಾಗೀರತೀಂ ಜನ್ಯಾಂ। ಯಮ ಸಹೋದರೀಂ ತಥಾಂ। ಶರ್ಕರಾಂ ಮಿಲೀನಂ ತಾಂ। ವಿದ್ಯಾಧರೀಂ ಗುಪ್ತಗಾಮಿನೀಂ। ತಂಮ್ಮಿಶ್ರಿತ ಪಾನೀಯಂ। ಕಾಪೀಮಹಂ ಪಿಬಸ್ಮಿ ಭೋ॥ Coffee that has the whiteness of milk as that of Ganga With it adds the dark decoction like Yama’s sister, Yamuna (who is dark in colour) To this, we add sugar, which dissolves without a trace, but is still there like the guptagamini river Saraswati. It is this Triveni sangama that we drink, when we have coffee. ಕೊಡಗಿನ ಕಾಫಿ ಯತ್ರ ಜನ್ಯತೇ ಕಾ...

ಕಳೆದದು ಸಿಗುವುದೇ?

Image
  🔈 Click here for audio link ಬಾನಿನಲ್ಲಿ ,  ರಾತ್ರಿಯಲ್ಲಿ   ಚುಕ್ಕಿ   ಎಣಿಸುತಿದ್ದೆವು। ಬಾವಿ   ಸೇದಿ ,  ನದಿಗೆ   ಹೋಗಿ   ಸಿಹಿನೀರ   ಕುಯುತ್ತಿದ್ದೆವು। ನಡೆದು   ಹೋಗಿ ,  ಸೈಕಲ್ಲು   ತುಳಿದು   ಸುತ್ತಲೆಲ್ಲಾಡುತ್ತಿದ್ದೆವು। ಹಿತ್ತಲಿನ   ಸೊಪ್ಪು , ಹಣ್ಣು   ಕಾಯಿಯುಣ್ಣುತ್ತಿದ್ದೆವು॥ ಮೊರದಿ   ಅಕ್ಕಿ   ಧಾನ್ಯಗಳ   ಅಂಗಳದಿ   ಕೇರುತಿದ್ದೆವು। ಪುಟ್ಟ   ಪಕ್ಷಿ   ಗುಬ್ಬಿ   ಹಾರಿ ,  ಕುಣಿದು   ಗೂಡಕಟ್ಟುತ್ತಿದ್ದವು। ಸಮಯವಿತ್ತು   ಹತ್ತು   ಜನಕೆ   ಹರಿಕಥೆ ,  ಹಾಡ   ಕೇಳಲು। ಪಕ್ಕದ   ಮನೆಯಾಕೆ   ಹಳೆಯ   ನೆಂಟರಂತೆ   ಪರಿಚಯ॥ ಅಂದಿನಕೂ   ಇಂದಿನಕೂ   ಏಕೆ   ಇಷ್ಟು   ಅಂತರ! ಕಾಲ   ಬದಲು   ಆಯಿತೆ ?  ನಾವೇನು   ಅದಕೆ   ಕಾರಣ ? ನಮ್ಮ   ಕೈಲಿ   ಏನಿದೇ ?  ಇದಕೆ   ಬೇಕೆ   ಕಾತರ ? ಏಳಿಗೆ   ಇದು   ಸಾಗಿದೇ ,  ಹೀಗೆಯೇ   ನಿರಂತರ॥ ಭೂಮಿ   ತಾಯಿ   ಹೆಸರುವಾಸಿ   ಎಂದು   ತನ್ನ   ತಾಳ್ಮೆಗೆ। ಅದನ   ಮೀರಿ   ನಡೆದಿಹವೇನು   ನಮ್ಮ ...

ಚುನಾವಣೆ

Image
  🔊Audio link ಆಳುವವರು   ಬೇಕೆಮಗೆ   ಆಳುವವರು ಆಂಗ್ಲರು   ತೊಲಗಿ   ಸ್ವಾತಂತ್ರ   ಬಂದರೂ ಆಳುವವರು   ಬೇಕೆಮಗೆ   ಆಳುವವರು ಗುಲಾಮಗಿರಿ   ಮಾಡಿ  ‌ ಸ್ವಾತಂತ್ರದ   ಛಲಮರೆತು ಆಳಾಗ   ಬಯಸಿ   ಆಳುವವರ   ಹಿಂಬಾಲಿಸಲು ಆಳುವವರು   ಬೇಕೆಮಗೆ   ಆಳುವವರು ಐದುವರುಷಕ್ಕೊಮ್ಮೆ   ದರುಶನವನೀವ ಐದುವರುಷದಲಿ   ಮೇಯ್ದು   ಕೊಬ್ಬುವ ಆಳುವವರು   ಬೇಕೆಮಗೆ   ಆಳುವವರು ಪಾದಯಾತ್ರೆ ,  ಭಾಷಣಗಳ   ಮಾಡಿ ಇನ್ನೈದು   ವರುಷ ತಾ   ಪೂಜಾರ್ಹನೆಂಬ ಆಳುವವರು   ಬೇಕೆಮಗೆ   ಆಳುವವರು ಆಳಾಗುವೆ  ನಿಮಗೆ  ನಾನೆಂದು   ನಕ್ಕು   ನುಡಿದು ಚಿಕ್ಕ   ರೊಕ್ಕವನ್ನು   ನಮಗೆ   ನೆಕ್ಕಿಸುವ ಆಳುವವರು   ಬೇಕೆಮಗೆ   ಆಳುವವರು ಕೆಂಬಣ್ಣ   ದೀಪ   ಹೊತ್ತು   ಸೈರನ್ನಿನ   ಕಹಳೆಯೂದಿ ಸರಕಾರದ   ಕಾರಿನಲ್ಲಿ   ರಕ್ತಕಾರುತ್ತ   ರಂಜಿಸುವ ಆಳುವವರು   ಬೇಕೆಮಗೆ   ಆಳುವವರು ಯೋಜನೆಗಳೆಂದು   ದುರಾಲೊಚನೆ   ಮಾಡಿ ಕಪ್ಪು   ಹಣವನಿಲ್ಲಿ   ಅಲ್ಲಿ   ಕೂಡಿಡುವ ಆಳುವವರು   ಬೇಕೆಮಗೆ   ಆಳುವವರು ನಮ್ಮಂತಹ   ಪ್ರಜೆಗಳಿಗೆ   ಪ್ರಭುವಾ...

I, me & my Biking

Image
My story about my passion for biking Click here for video link A rider’s dream Click here 👇🏽 for video   Ride through the forest Click here 👇🏽 for video The siblings breakfast ride Click here 👇🏽 for video Speed ride on NICE road Click here 👇🏽 for video Yeh mere humsafar Click here 👇🏽 for video

ಕವನ

Image
  🔊Audio link ನಾ   ತಿಳಿಯದೆ   ಬರೆವೆನೇನ್ಕವನವನು ಅದೆ   ಹೊರ   ಹೊಮ್ಮುವುದೋ ಅಂತರಾಳದ   ತುದಿತ   ಉಕ್ಕುವುದೊ ನಾ   ತಿಳಿಯದೆ   ಬರೆವೆನೇನ್ಕವನವನು ? ಮನದ   ಭಾವನೆಗಳ   ಹೊರದೂಡಲಿಚ್ಚೆಯು ಒಮ್ಮೊಮ್ಮೆ   ಝರಿಯಂತೆ   ಹರಿಯುವುದು ದುಮುಕುವುದು   ಎತ್ತರದ   ಜಲಪಾತದಂತೆ ನಾ   ತಿಳಿಯದೆ   ಬರೆವೆನೇನ್ಕವನವನು ? ಪದ   ವಾಕ್ಯ     ಜೋಡಿಸುವ   ಚಾಣಾಕ್ಷ ವ್ಯಾಕರಣ   ಛಂದಸ್ಸು   ಪ್ರಾಸಗಳ   ಪರಿಹಾಸ ಭಾವನೆ   ಅನಿಸಿಕೆಗಳನಿವಾರ್ಯ   ಅರಿವುಗಳು ನಾ   ತಿಳಿಯದೆ   ಬರೆವೆನೇನ್ಕವನವನು ? ಸುರಿವುದು   ಜಿನುಗು   ಮಳೆಯತೆರೆ   ಎಡೆಬಿಡದೆ ಕರಗಲಾರವು   ಆ   ಕಪ್ಪು   ಮೋಡಗಳು ಅದಾವ   ಕಡಲ್ಲಿಂದ   ಏನ   ಹೊತ್ತು   ತಂದಿಹುದೋ ನಾ   ತಿಳಿಯದೆ   ಬರೆವೆನೇನ್ಕವನವನು ? ಬಿಳಿಯ   ಹಾಳೆಗೆ   ಕಪ್ಪು   ಶಾಯಿಯಾ   ಮಚ್ಚೆಗಳು ಇಚ್ಚಿಸದೆ   ಹೊರಚೆಲ್ಲಿದಾ   ಸತ್ಯಗಳು ಮನತೆರೆದ   ಜಾಣನಾ   ವಾಕ್ಯಗಳು ನಾ   ತಿಳಿಯದೆ     ಬರೆದೆನೇನ್ಕವನವನು। - ನಾ ಶ್ರೀ ಮೋ