ನದಿಯ ನೀರು
ಬಾನಿನಿಂದ ಇಳಿದು ಜಾರಿ
ಝರಿಯ ಸೇರಿ ಝರಿಯು ಆಗಿ
ಕೋಡಿ ಹರಿದು ನದಿಯ ಸೇರಿ
ನದಿಯ ನೀರು ನಾನಾಗಬೇಕು
ಭೋರ್ಗರೆವ ಜಲಪಾತವಾಗಿ
ಕಣಿವೆ ಕೊರೆದು ನುಸುಳಿ ಹೊರಳಿ
ಅವ್ಯಾಹತವಾಗಿ ಹರಿವ
ನದಿಯ ನೀರು ನಾನಾಗಬೇಕು
ಮಣ್ಣ ತೊಳೆದು ಮಣ್ಣ ತೊರೆದು
ತಿಳಿಯ ಸ್ಪಷ್ಠತೆಯು ಆಗಿ
ಬಂಡೆಗೆ ಮೈಯೊಡ್ಡಿ, ದಾಟಿ
ನದಿಯ ನೀರು ನಾನಾಗಬೇಕು
ಜಲಚರಕೆ ಆಸರೆಯಾಗಿ
ಪೈರು ಹಸಿರು ತುಂಬಿಸುತ್ತ
ಹರಿದು ತಳೆದು ಧುಮುಕುತ್ತ
ನದಿಯ ನೀರು ನಾನಾಗಬೇಕು
ಪಯಣದಲಿ ಅಂತ್ಯದಲಿ
ರವಿ ಕಾಂತಿಗೆ ಹಗುರಾಗಿ
ತೇಲಿ ಮೇಲೆ ನಭವಸೇರಿ
ಕಪ್ಪು ದಟ್ಟ ಮೋಡವಾಗಿ
ಬಾನಿನಿಂದ ಇಳಿದು ಜಾರಿ
ನದಿಯ ನೀರು ನಾನಾಗಬೇಕು
ನದಿಯ ನೀರು ನಾನಾಗ ಬೇಕು.

Comments
Post a Comment
What is your opinion please comment here