ಪುಡಾರಿ
ಆಳುವವರು
ಆಳುವವರು ಬೇಕೆಮಗೆ ಆಳುವವರು
ಆಂಗ್ಲರು ತೊಲಗಿ ಸ್ವಾತಂತ್ರ ಬಂದರೂ
ಆಳುವವರು ಬೇಕೆಮಗೆ ಆಳುವವರು
ಗುಲಾಮಗಿರಿ ಮಾಡಿ ಸ್ವಾತಂತ್ರದ ಛಲಮರೆತು
ಆಳಾಗ ಬಯಸಿ ಆಳುವವರ ಹಿಂಬಾಲಿಸಲು
ಆಳುವವರು ಬೇಕೆಮಗೆ ಆಳುವವರು
ಐದುವರುಷಕ್ಕೊಮ್ಮೆ ದರುಶನವನೀವ
ಐದುವರುಷದಲಿ ಮ್ಯೈದು ಕೊಬ್ಬುವ
ಆಳುವವರು ಬೇಕೆಮಗೆ ಆಳುವವರು
ಪಾದಯಾತ್ರೆ, ಭಾಷಣಗಳ ಮಾಡಿ
ಇನ್ನೈದು ವರುಷ ಪೂಜಾರ್ಹನೆಂಬ
ಆಳುವವರು ಬೇಕೆಮಗೆ ಆಳುವವರು
ಆಳಾಗುವೆ ನಾನೆಂದು ನಕ್ಕು ನುಡಿದು
ಚಿಕ್ಕ ರೊಕ್ಕವನ್ನು ನಮಗೆ ನೆಕ್ಕಿಸುವ
ಆಳುವವರು ಬೇಕೆಮಗೆ ಆಳುವವರು
ಕೆಂಬಣ್ಣ ದೀಪ ಹೊತ್ತು ಸೈರನ್ನಿನ ಕಹಳೆಯೂದಿ
ಸರಕಾರದ ಕಾರಿನಲ್ಲಿ ರಕ್ತಕಾರುತ್ತ ರಂಜಿಸುವ
ಆಳುವವರು ಬೇಕೆಮಗೆ ಆಳುವವರು
ಯೋಜನೆಗಳೆಂದು ದುರಾಲೊಚನೆ ಮಾಡಿ
ಕಪ್ಪು ಹಣವನಿಲ್ಲಿ ಅಲ್ಲಿ ಕೂಡಿಡುವ
ಆಳುವವರು ಬೇಕೆಮಗೆ ಆಳುವವರು
ನಮ್ಮಂತಹ ಪ್ರಜೆಗಳಿಗೆ ಪ್ರಭುವಾಗಿ ಮೆರೆಯಲು
ಪ್ರಜಾಪ್ರಭುತ್ವದ ಸೋಗುಹಾಕಿ ಕುಣಿಸುವ
ಆಳುವವರು ಬೇಕೆಮಗೆ ಆಳುವವರು
ಕೋಮು ಬೆಳಿಸಿ ಹಗೆಯ ಹೊಗೆಯ ತುಂಬಿ
ಹಗರಣಗಳ ಮಾಡಿ ನಮ್ಮನ್ನಳುಸುವ
ಆಳುವವರು ಬೇಕೆೇ ನಮಗೆ ಆಳುವವರು
- ನಾ ಶ್ರೀ ಮೋ
Comments
Post a Comment
What is your opinion please comment here