ಬಾಲ್ಯ
ಬಾಲ್ಯ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
ಬಣ್ಣ ಹಚ್ಚಿ, ಹೋಲಿ ಎರೆಚಿ
ಸೌದೆ ಕದ್ದು, ಕಾಮನುರಿಸಿ
ಬುಗುರಿ, ಗಿಲ್ಲಿದಾಂಡಲಾಡಿ
ಗಾಳಿ ಪಟವ ಹಾರಿಬಿಟ್ಟ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
ಬೀದಿ ಸುತ್ತಿ, ಕ್ರಿಕೆಟ್ಟಾಡಿ
ಬಣ್ಣದ ಐಸ್ಕ್ರೀಮು ಚೀಪಿ
ನಾಲಿಗೆಯನು ಬಣ್ಣಗೊಳಿಸಿ
ನೆಲ್ಲಿಗೆ ಬಾಯಿಟ್ಟು ನೀರು ಕುಡಿದ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
ಮರಕೋತಿ, ಐಸ್ಪೈಸ್
ಜೂಟಾಟ, ಕಳ್ಳ ಪೋಲಿಸ್
ಬುಗುರಿ ಗುನ್ನ, ಗೋಲಿಯಾಟ
ಕತ್ತರಿ ಸೈಕಲ್ಲು ಕಲಿತ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
ಹರಿಕತೆ ,ಬೀದಿ ನಾಟಕಗಳು
ಗಣೇಶೋತ್ಸವದ ಆರ್ಕೆಸ್ಟ್ರಾಗಳೋ
ಓಮ್ಮೊಮ್ಮೆ ಅಣ್ಣವರ ಚಿತ್ರಗಳೋ
ಬನ್ನೇರುಘಟ್ಟದ ಸೈಕಲ್ಲು ಟ್ರಿಪ್ಪುಗಳೋ
ಎಲ್ಲಿ ಕಳೆದು ಹೋದವೋ
ಆ ಕಳೆದ ದಿನಗಳು
ಮರುಕಳಿಸಿ ಬಾರದೇಕೊ
ಆ ಸಿಹಿಯ ಕ್ಷಣಗಳು
- ನಾ ಶ್ರೀ ಮೋ
Comments
Post a Comment
What is your opinion please comment here