Posts

Showing posts from November, 2022

ನೀರು ನದಿ

Image
🔊Audio Recitation of the Poem   ನೀರು   ನದಿ ತಿಳಿ   ತಿಳಿಯ   ನೀರು   ಝುಳ   ಝುಳನೆ   ಹರಿದು ದಬ   ದಬದಿ   ದುಮುಕಿ ಎಡಬಲಕೆ   ತಿರುವಿ ಹರಿದಿದೇ   ನೋಡು ನೀಳದಾ   ನದಿಯು ಸರ   ಸರದಿ   ಹರಿವ ಸರಸಕೆ   ಸಂದ   ಸಂಕಟವು ಕರಿ   ಕರಿಯಂತಿದ್ದ   ಅಣೆಕಟ್ಟು ಅಡ್ಡವಾಗಿಸಿ   ಅಡ್ಡಾಡಗೊಡದ ನಿಂತಿದೇ   ನೋಡು ಶಾಂತತೆಯ   ಮಡುವು ಗಿರ   ಗಿರನೆ   ತಿರುವ ಸುಳಿ   ಸುಳಿಯ   ನೀರು ಎಳೆ   ಎಳೆದು   ಒಳಗೆ ಒಳ   ಒಳಗೆ   ಒಯ್ದು ಕರಿ   ಕಪ್ಪು   ಕಾಣದೇನು ಬಲು   ಘನವು   ತಿಳಿಯ   ನೀರು ದಮ   ದಮನೆ   ದುಮುಕು ಬುಳ   ಬುಳನೆ   ಬಳುಕು ತೆಳು   ತೆಳುವ   ತಳೆದು ಜಲ   ಜಾಲಕೆ   ಜಾರು ಅಲೆ   ಅಲೆದು   ಅಲೆಯಾಗು ಜಗದೊಳು   ಜಾಣ   ಜಲವಾಗು - ನಾ   ಶ್ರೀ   ಮೋ

ವ್ಯಥೆ

Image
  ಬಂದದ್ದು   ಒಬ್ಬೊಂಟಿಯಾಗಿ   ಈ   ಭುವಿಗೆ ತಿಳಿದಿಹುದು   ಪೋಗುವೆ   ಒಬ್ಬೊಂಟಿಗ   ನಾನು ನಾನಾರು   ನಾನರಿಯೆ ,  ಗುರಿಗೊತ್ತುಗಳೇನು ? ಕೆಲದಿನಗಳವನ   ಹುಡುಕಿದೆ   ನಾನು   ವಿಸ್ಮಯದಿ ಮಿಕ್ಕೆಲ್ಲ   ದಿನವಾದವು   ವ್ಯರ್ಥ   ಕಾಲದ   ಹರಣ ಇದೆನ್ನ   ವ್ಯಥೆಯ   ಜೀವಿತದ   ಕಥೆಯು॥೧॥ ನನ್ನ   ದೇಹದ   ದೇಗುಲದಿ   ಅವನು   ನೆಲೆಸಿಹನು ನನ್ನಾಂತರ್ಯದಲಿ   ರಾರಾಜಿಸುವವನು ಮಬ್ಬಾದ   ಕ್ಷೀಣಿಸಿದ   ಕಣ್ಣುಗಳಿಗಿವ   ಕಾಣಲಿಲ್ಲ ಜೀವನದ   ಕೊನೆಯುಸಿರು   ಹತ್ತಿರವಾಗೆ ಹಿಂದಿನದೇನು   ಇಂದಿನ   ಕಾರ್ಯಸಿದ್ಧಿಗೆ   ಸಲ್ಲ ಇದೆನ್ನ   ವ್ಯಥೆಯ   ಜೀವಿತದ   ಕಥೆಯು॥೨॥ ಓ   ದೇವ   ನೀ   ಕಟುಕ   ನೀ   ಕುಹಕ   ಸರಿಯೇ ಹೋಳೆ   ಹೊಳೆದು   ಕಣ್ಣ   ನೀ   ಕಟ್ಟಿಸಿದೆ ಮಾಯೆಯೊಳು   ಒಡ್ಡಿ   ಸಂತಸದಿ   ನೀ   ನಲಿದೆ ಇದೊ   ಬಂದೆಂದೆನುತ   ಬರದೆ   ಬರಿದಾಗಿಸಿದೆ ಇದೆನ್ನ   ವ್ಯಥೆಯ   ಜೀವಿತದ   ಕಥೆಯು ॥೩॥ ಕಥೆಗೆ   ಆರೋಹಣವು   ಮೇಲೇರಿಸಿತು   ಭಾವ ಮೇಲೇರಿದ್ದು   ತಂತಾನೆ ...

ತಡ

Image
🔊Audio link ನಿನ್ನೆಯತನಕ   ನಲಿದಾಡುತ್ತಿದ್ದ ಬಲು   ಮೋಜಿ   ಗೆಳೆಯನೊಬ್ಬ ಇದ್ದಿಕ್ಕಿದ್ದಂತೇನಾಯಿತೊ   ತಿಳಿಯೆ ವಾಟ್ಸಾಪ್‌ನಲ್ಲಿ   ಅವನು   ಸ್ತಬ್ಧ ಬಂದದ್ದೆಲ್ಲ   ಫಾರ್ವರ್ಡು   ಪ್ರತಿ   ವಿಷಯಕ್ಕೂ   ಟೀಕೆ   ಟಿಪ್ಪಣಿ ಮರೆಯುತ್ತಿರಲ್ಲಿಲ್ಲ   ಯಾರ   ಹುಟ್ಟುಹಬ್ಬ ಮರೆತನಲ್ಲ   ಇಂದೇಕೊ   ಎಂದನೊಬ್ಬ ಬಹುಮುಖ   ಪ್ರತಿಭೆ   ಬಣ್ಣದ   ವ್ಯಕ್ತಿ ಸಂಗಿತ ,  ನಾಟಕ ,  ಕ್ರಿಕೆಟ್ಟು ,  ಇಸ್ಪೀಟು ಗುಂಪಿನಲಿ   ಇವನಿಗೆ   ಸರಿಸಾಟಿಯಿಲ್ಲ   ಹೋಗದ   ಹೋಟೇಲ್ಲಿಲ್ಲ   ಇವ   ತಿಂಡಿಪೋತ ಬೀದಿಯಲ್ಲಿ   ಸಿಕ್ಕರೆ   ಯಾರಾದರೂ ತಿಳಿದಿಲ್ಲದಿರಲಿ   ಪರಿಚಯಿಸಿಕೊಂಡು ಬೆರೆಯುವ   ಮನಸು   ನಿಶ್ಕಪಟಿ ತಿಳಿದಿದ್ದವರಿಗೆ   ಸಿಕ್ಕು   ಕೊರೆಯುವವನು ಸಂತಸ ,  ಸಂತಾಪಗಳಿಗೆಲ್ಲ   ಇವ   ಮುಂದು ಹಿಂತಿರುಗದೆ   ಸಹಾಯಕ್ಕಿಳಿವ   ತನ್ನವರೆಂದು ನಕ್ಕು   ನಲಿಸುವ   ಮಕ್ಕಳಿಗೆ   ಮಾಮ   ತಾತನೆಂದು ಸದಾ   ಹಸನ್ಮುಖಿ ,  ಇರುವನಿತರರಿಗೆಂದು ಸುದ್ಧಿಯೇ   ಇಲ್ಲವಲ್ಲ   ಎಲ್ಲಿಹನೋ   ಇವನು ಏನಾಗಿದೆಯೋ   ಇವಗೆ   ಮೆಸೇಜುಗಳಿಲ್ಲ   ಯಾರಿ...

ಅಲೆಮಾರಿಯ ದೀಪ

Image
🔊Audio link for recitation of the poem   ಕಂಡಿಲ್ಲದಸ್ಥಳದಿಂ   ಕಾಣದಾ   ಸ್ಥಳಕೆ ,   ತಿಳಿದಿಲ್ಲದಾ     ದಾರಿಯೊಳು   ಪಯಣಿಸುವೆನು     ನಾನು  ll  ಕಲ್ಲು   ಮುಳ್ಳಿನ   ಹಾದಿ ,  ಏರು   ಪೇರಿನ   ಭೂಮಿ   ಕಗ್ಗತ್ತಲಾ   ನಡುಗೆ ,  ಒಂಟಿತನದಾ     ಭಾಸ   ಕಂಡಿಲ್ಲದಸ್ಥಳದಿಂ   ಕಾಣದಾ   ಸ್ಥಳಕೆ   ನಾನ್ .. ಹೆಜ್ಜೆ   ಎಡವದಿರಲೆಂದು ,  ಮನ   ಭ್ರಾಂತಿಯಿಂ     ಹೊರತರಲು   ಬೇಕೆನಗೆ   ದೀಪವು ,  ಪ್ರಜ್ವಲಿಸುವ     ಜ್ವಾಲವೋ ,  ಸಣ್ಣದೀವಿಟಿಗೆಯೋ ಚೆಲ್ಲಲದು   ಬೆಳಕನ್ನು     ಮುಂದಿಡುವೆ   ಹೆಜ್ಜೆಯನು   ತೋರಲದು   ದಾರಿಯನು ,  ಮುಂಬರುವ   ಹಾದಿಗೆ ಪಯಣದಲಿ   ಜೊತೆಯಾಗಿ     ಸಹಚಾರ್ಯೆ     ನಡೆಸುತ್ತ   ನನ್ನ     ಭಾಷೆಯರಿಯದ   ಮೌನವನು     ತಾಳುತ್ತಾ   ಕಂಡಿಲ್ಲದಸ್ಥಳದಿಂ   ಕಾಣದಾ   ಸ್ಥಳಕೆ   ನಾನ್ ... ನಂದದಿರಲೀದೀಪ     ತೊಯ್ಯದಿರಲಿ   ಹಣತೆ   ಸುಡದಿರಲಿ     ಜ್ವಾಲೆ     ಈ   ನನ್...

Wandering Light

Image
  From an unknown place and to a place unknown   Travel forth we, on a path unknown.   That path strewn with rocks and thorns  That path traversing with all its ups and downs  That walk in the darkness and all alone From an unknown place and to a place unknown  Travel forth we, on a path unknown.  Lest that I falter, fall into a stupor Need a beam, a flickering flame  or torch to light that path,  to show and say Onward you go on your way Move with me, my fellow traveller Nay a sound nor a whisper With all its silence as my partner From an unknown place and to a place unknown  Travel forth we, on a path unknown.  Let the light not be downed Let that lamp not be drowned Let the torch not scorch that path In that gale I protect you sure For its me and my selfish more  Be my guard and be my shadow  From an unknown place and to a place unknown  Travel forth we, on a path unknown.