ನೀರು ನದಿ







 ನೀರು ನದಿ

ತಿಳಿ ತಿಳಿಯ ನೀರು 

ಝುಳ ಝುಳನೆ ಹರಿದು

ದಬ ದಬದಿ ದುಮುಕಿ

ಎಡಬಲಕೆ ತಿರುವಿ

ಹರಿದಿದೇ ನೋಡು

ನೀಳದಾ ನದಿಯು


ಸರ ಸರದಿ ಹರಿವ

ಸರಸಕೆ ಸಂದ ಸಂಕಟವು

ಕರಿ ಕರಿಯಂತಿದ್ದ ಅಣೆಕಟ್ಟು

ಅಡ್ಡವಾಗಿಸಿ ಅಡ್ಡಾಡಗೊಡದ

ನಿಂತಿದೇ ನೋಡು

ಶಾಂತತೆಯ ಮಡುವು


ಗಿರ ಗಿರನೆ ತಿರುವ

ಸುಳಿ ಸುಳಿಯ ನೀರು

ಎಳೆ ಎಳೆದು ಒಳಗೆ

ಒಳ ಒಳಗೆ ಒಯ್ದು

ಕರಿ ಕಪ್ಪು ಕಾಣದೇನು

ಬಲು ಘನವು ತಿಳಿಯ ನೀರು


ದಮ ದಮನೆ ದುಮುಕು

ಬುಳ ಬುಳನೆ ಬಳುಕು

ತೆಳು ತೆಳುವ ತಳೆದು

ಜಲ ಜಾಲಕೆ ಜಾರು

ಅಲೆ ಅಲೆದು ಅಲೆಯಾಗು

ಜಗದೊಳು ಜಾಣ ಜಲವಾಗು

- ನಾ ಶ್ರೀ ಮೋ

Comments

  1. ಲಕ್ಷ್ಮೀಕಾಂತ ಹೆಗಡೆ27 April 2024 at 08:32

    ಹೌದು, ತಿಳಿಯುವುದೆಂದರೆ ತಿಳಿಯುವುದು, (ಅರಿಯುವುದು)ಮಾತ್ರವಲ್ಲ. ತಿಳಿಯಾಗುವುದು ಕೂಡ. ನಮಗೆ ತಿಳಿಯಲಿ, ತಿಳಿಯಾಗದಿರಲಿ, ಸಂಪೂರ್ಣ
    ತಿಳಿಯಾಗುವದು ಮುಖ್ಯ.

    ReplyDelete
  2. Yes. We have to be completely transparent and clear in our thinking and the way we lead life.

    ReplyDelete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

A trip down the memory lane

Sixty - retired?

Deepavali Reflections: King Bali and the Spirit of Righteousness

Being bald

REML Himalayan Bike

My first long Motorbike ride

A Lesson learnt in a bike ride