ಅಲೆಮಾರಿಯ ದೀಪ

🔊Audio link for recitation of the poem 



ಕಂಡಿಲ್ಲದಸ್ಥಳದಿಂ ಕಾಣದಾ ಸ್ಥಳಕೆ,

 ತಿಳಿದಿಲ್ಲದಾ  ದಾರಿಯೊಳು ಪಯಣಿಸುವೆನು  ನಾನು ll 

ಕಲ್ಲು ಮುಳ್ಳಿನ ಹಾದಿಏರು ಪೇರಿನ ಭೂಮಿ 

ಕಗ್ಗತ್ತಲಾ ನಡುಗೆಒಂಟಿತನದಾ  ಭಾಸ 

ಕಂಡಿಲ್ಲದಸ್ಥಳದಿಂ ಕಾಣದಾ ಸ್ಥಳಕೆ ನಾನ್..


ಹೆಜ್ಜೆ ಎಡವದಿರಲೆಂದುಮನ ಭ್ರಾಂತಿಯಿಂ  ಹೊರತರಲು 

ಬೇಕೆನಗೆ ದೀಪವುಪ್ರಜ್ವಲಿಸುವ  ಜ್ವಾಲವೋಸಣ್ಣದೀವಿಟಿಗೆಯೋ

ಚೆಲ್ಲಲದು ಬೆಳಕನ್ನು  ಮುಂದಿಡುವೆ ಹೆಜ್ಜೆಯನು 

ತೋರಲದು ದಾರಿಯನುಮುಂಬರುವ ಹಾದಿಗೆ

ಪಯಣದಲಿ ಜೊತೆಯಾಗಿ  ಸಹಚಾರ್ಯೆ  ನಡೆಸುತ್ತ 

ನನ್ನ  ಭಾಷೆಯರಿಯದ ಮೌನವನು  ತಾಳುತ್ತಾ 

ಕಂಡಿಲ್ಲದಸ್ಥಳದಿಂ ಕಾಣದಾ ಸ್ಥಳಕೆ ನಾನ್...


ನಂದದಿರಲೀದೀಪ  ತೊಯ್ಯದಿರಲಿ ಹಣತೆ 

ಸುಡದಿರಲಿ  ಜ್ವಾಲೆ   ನನ್ನ ಪಥವನ್ನು 

ಬಿರುಗಾಳಿ ಬೀಸಲದು ಕೈಕೊಟ್ಟು ಕಾಪಾಡಿ 

ಸಲಹುವೆನು ನಿನನ್ನು  ನಾ ಸ್ವಾರ್ಥಿಯಾಗಿ 

ಬೇಕೆನಗೆ ನೀನಿಂದು  ನನ್ನ ಬೆಂಗಾವಲಾಗಿ

ನನಗಂಟಿಕೊಂಡಿರುವ  ಎನ್ನ ಛಾಯೆಯಾಗಿ

ಕಂಡಿಲ್ಲದಸ್ಥಳದಿಂ ಕಾಣದಾ ಸ್ಥಳಕೆ ನಾನ್...

ನಾ ಶ್ರೀ ಮೋಹನ

Comments

Popular posts from this blog

Those Three months in 2022

Those months after ...

My Brother’s friend