ತಡ
ನಿನ್ನೆಯತನಕ ನಲಿದಾಡುತ್ತಿದ್ದ
ಬಲು ಮೋಜಿ ಗೆಳೆಯನೊಬ್ಬ
ಇದ್ದಿಕ್ಕಿದ್ದಂತೇನಾಯಿತೊ ತಿಳಿಯೆ
ವಾಟ್ಸಾಪ್‌ನಲ್ಲಿ ಅವನು ಸ್ತಬ್ಧ
ಬಂದದ್ದೆಲ್ಲ ಫಾರ್ವರ್ಡು
ಪ್ರತಿ ವಿಷಯಕ್ಕೂ ಟೀಕೆ ಟಿಪ್ಪಣಿ
ಮರೆಯುತ್ತಿರಲ್ಲಿಲ್ಲ ಯಾರ ಹುಟ್ಟುಹಬ್ಬ
ಮರೆತನಲ್ಲ ಇಂದೇಕೊ ಎಂದನೊಬ್ಬ
ಬಹುಮುಖ ಪ್ರತಿಭೆ ಬಣ್ಣದ ವ್ಯಕ್ತಿ
ಸಂಗಿತ, ನಾಟಕ, ಕ್ರಿಕೆಟ್ಟು, ಇಸ್ಪೀಟು
ಗುಂಪಿನಲಿ ಇವನಿಗೆ ಸರಿಸಾಟಿಯಿಲ್ಲ
ಹೋಗದ ಹೋಟೇಲ್ಲಿಲ್ಲ ಇವ ತಿಂಡಿಪೋತ
ಬೀದಿಯಲ್ಲಿ ಸಿಕ್ಕರೆ ಯಾರಾದರೂ
ತಿಳಿದಿಲ್ಲದಿರಲಿ ಪರಿಚಯಿಸಿಕೊಂಡು
ಬೆರೆಯುವ ಮನಸು ನಿಶ್ಕಪಟಿ
ತಿಳಿದಿದ್ದವರಿಗೆ ಸಿಕ್ಕು ಕೊರೆಯುವವನು
ಸಂತಸ, ಸಂತಾಪಗಳಿಗೆಲ್ಲ ಇವ ಮುಂದು
ಹಿಂತಿರುಗದೆ ಸಹಾಯಕ್ಕಿಳಿವ ತನ್ನವರೆಂದು
ನಕ್ಕು ನಲಿಸುವ ಮಕ್ಕಳಿಗೆ ಮಾಮ ತಾತನೆಂದು
ಸದಾ ಹಸನ್ಮುಖಿ, ಇರುವನಿತರರಿಗೆಂದು
ಸುದ್ಧಿಯೇ ಇಲ್ಲವಲ್ಲ ಎಲ್ಲಿಹನೋ ಇವನು
ಏನಾಗಿದೆಯೋ ಇವಗೆ ಮೆಸೇಜುಗಳಿಲ್ಲ
ಯಾರಿಗೂ ಇತ್ತೀಚೆಗೆ ಅವ ಕಾಣಲಿಲ್ಲ
ಎಲ್ಲಿ ಅಡಗಿಕುಳಿತಿಹನೋ ಅಡಗಿಸಿ ಸೊಲ್ಲ
ಇತರಿಂದ ಇರುವ ವಿಳಾಸವ ತಿಳಿದೆ
ನೋಡಲನವ ಹೇಳದೆಯೆ ಹೊರಟೆ
ನೋಡಲೇಬೇಕೆಂದು ಮನದಲಿ ಹಠ
ಅಷ್ಟರಲ್ಲಾಗಲೇ ಅವನು ಗೋಡೆಯಮೇಲಿನ
ಚಿತ್ರ ಪಟ
Dear NSM
ReplyDeleteI find your poem intriguing and relatable. It beautifully captures the transformation of a once lively and mischievous friend who has now become elusive and silent. The contrast between his critical nature and forgetfulness of his own birthday adds depth to his character. The mention of his versatile talents and his inability to fit into a specific group resonates with me. The poem leaves me wondering about the reasons behind his sudden disappearance. Overall, it's a thought-provoking piece that beautifully captures the complexities of human nature.
Keep writing, let our memories adhere.
Through your verses, let them forever dwell, enchanting tales that your heart will tell. 🙏
Thanks
DeleteNSM Sir, the poem is quite riveting and engaging…really loved the suspense too…usage of language is mind blowing..good luck with your writing..!!
DeleteVijay (riders grp)
Thanks Vijay Dasmi. Please read through a blog called "My brother's friend" in the same same BlogSpot. It happened to us and I wanted to document it.
DeleteSakkattagide geleya
ReplyDeleteThanks Sridhara
Delete