ಜಾತ್ರೆ

 


ಜಾತ್ರೆ

ಮನದೊಳಗಿನ ಜಾತ್ರೆ ನೆನಪುಗಳ ಮೆರವಣಿಗೆ


ಗಿರಗೀಟಲೆಯಂತೆ ಗಿರಗಿರನೆ ತಿರುಗಿ

ಭಯೋನ್ಮಾದಗಳ ಚೆಲ್ಲಾಟವಾಡುತ್ತ 

ನಗಿಸಿ ಅಳಿಸಿಹುದು ಚೀರಿ ಕುಳಿತಿಹೆ ನಾನು

ಸುತ್ತು ಮುಗಿಯಲಿಹೀಗೇ ಓಡುತಲಿರಲಿ ಎಂದೆನುತ

ಕನವರಿಸಿ ಬೀಳುತ್ತಿದೆ ಕನಸಿನಾ ಮೆರವಣಿಗೆ ಮನದಲ್ಲಿನ ಜಾತ್ರೆ


ಬಣ್ಣ ಪೀಪಿಗಳು ಚೀರಿ ಕೂಗುತಲಿದೆ

ಬೇಲೂನನುಜ್ಜಿದ ಕಿರ್ರು ಕಿರ್ರಿನ ಕರೆಯು

ಕಿವಿ ಮುಚ್ಚುವ ತವಕತೆರೆದು ಕೇಳುವಾ ಬಯಕೆ

ಹಿಂಸೆ ಹಿತಗಳ ಉಯ್ಯಾಲೆಯಾಡುತಿದೆ

ಹರಿದು ಬರುತಿದೆ ಕನಸಿನ ಮೆರವಣಿಗೆ ಮನದಲಿನ ಜಾತ್ರೆ


ಬೆಂಡು ಬತ್ತಾಸುಗಳು ಬಣ್ಣ ಹಚ್ಚಿದ ಸಿಹಿಯು

ಹೊಲಸು ಗಲೀಜುಗಳ ನಡುವೆ ಕೈ ಬೀಸಿ ಕರೆಯುತಿದೆ

ತಿನ್ನಬೇಕೆನ್ನುವಾಸೆ ತಿನ್ನಬಾರದೆಂಬಾ ತಿಳಿವು

ಮನದಿ ಗುದ್ದಾಡುತಿದೆ ನನ್ನ ಬೇಕು ಬೇಡಗಳು

ಪುಟಿದೆದ್ದು ಬರುತಿದೆ ಕನಸಿನ ಮೆರವಣಿಗೆ ಮನದಲಿನ ಜಾತ್ರೆ


ಅದೋ ನೋಡಲ್ಲಿ ಮಿಂಚಿಹುದು ಜಾತ್ರೆ ಮೆರಗಿನ ತೇರು

ಫಳ ಫಳಾ ಎಂದು ಥಳ ಥಳೈಸುವ  ದಿವ್ಯ ರಥವು

ಹೊತ್ತು ತಂದಿಹುದು ಅವನಎನ್ನತ್ತ ಸರಿದಿಹುದು

ಶಿರ ಬಾಗಿ ನಮಿಸಲೇ ಶಿರವೆತ್ತಿ ನೋಡಲೇನ್‌

ಘನಗಾಂಭೀರ್ಯ ಮೆರವಣಿಗೆ ಜಾಣರಾ ಜಾತ್ರೆ

Comments

Popular posts from this blog

Those Three months in 2022

Those months after ...

My Brother’s friend

Bike ride in Thailand

Deepavali Reflections: King Bali and the Spirit of Righteousness

A trip down the memory lane

Sixty - retired?

Being bald

REML Himalayan Bike

My first long Motorbike ride