ನಡುವೆ

 


ಕಪ್ಪಲ್ಲ ಬಿಳುಪಲ್ಲ ಹೊಳಪು ಥಳಕುಗಳಿಲ್ಲ।

ಕಂಡದ್ದು ನೋಡಿದ್ದು ಬೆಳಕು ಕತ್ತಲೆಯಲ್ಲ।

ತಿಂದ್ದು ಕುಡಿದದ್ದು ಸಿಹಿ ಖಾರಗಳಲ್ಲ।

ಮಿಶ್ರಿತ ಮಿಲನವು ಅತಿರೇಕ ಬೇಕಿಲ್ಲ॥


ನೀನಲ್ಲ ನಾನಲ್ಲ ನನ್ನನಿನ್ನದೇನಿಲ್ಲ

ಬೋಳಲ್ಲ ಹಸಿರಲ್ಲ ಸುತ್ತಲಿನ ಮರವೆಲ್ಲ

ಕಾಡಲ್ಲ ಕಡಲಲ್ಲ ಬರಡಲ್ಲ ಗೊರಡಲ್ಲ

ಮಿಶ್ರಿತ ಮಿಲನವು ಅತಿರೇಕ ಬೇಕಿಲ್ಲ॥


ದೇವಾಮೃತ ದಾನವರ ವಿಶವಲ್ಲ

ಗೋಚರನೋ ಅಗೋಚರನೂಅಲ್ಲ

ನಾಸ್ತಿಕ ಪರಮ ವೈದಿಕನೂ ಅಲ್ಲ

ಮಿಶ್ರಿತ ಮಿಲನವು ಅತಿರೇಕ ಬೇಕಿಲ್ಲ॥


ಸಮಚಿತ್ತದಿ ನೋಡಿ ಅನಿಸ್ಚಿತವಿದೆಲ್ಲ

ಮಾಡದಿರೆ ಅಪೇಕ್ಷೆ ಉಪೇಕ್ಷಗಳಿದಕೆಲ್ಲ

ತಿಳಿದಿದ್ದು ಇದೊಂದು ತಿರುತಿರುವಾಗಾಣ

ನಡುವೆ ಅಛಲದಿ ನಿಂತವನೆ ನಿಜದೀ ಜಾಣ॥


Comments

Popular posts from this blog

Those Three months in 2022

Those months after ...

My Brother’s friend

A trip down the memory lane

Sixty - retired?

Deepavali Reflections: King Bali and the Spirit of Righteousness

Being bald

REML Himalayan Bike

My first long Motorbike ride

A Lesson learnt in a bike ride