ಸಂಕ್ರಾಂತಿ



 ಚಿತ್ರ ಕೃಪೆ - ಅರವಿಂದ ಶಾಸ್ತ್ರಿ (ಸುರಗೀ - ಕುಮಟ / ಕಡಲೇ ಕಡಲತೀರ)


ಇಣುಕಿ ನೋಡುತ್ತಿದ್ದ ಆಗಸದಂಚಿದಿಂದಿವಾಕರ

ಬೆಳಕೀಯಬೇಕೆಂದು ಮೈಮುರಿದು ಮೇಲೇಳುತ

ಚೆಲ್ಲುತ ತನ್ನ ಚೆಲುವ ಕಿರಣಗಳ ಜೀವ ಜೀವಕೆ ಸಾರ

ಸುತ್ತಲಿನಾ ಕತ್ತಲ ಕರಗಿಸಿ ದುಗುಡ ಮರೆಮಾಚಲೆಂದೋ

ಬೆಳಕಿತ್ತು ಕಣ್ತೆರಿಸಿ ಸಂಚನೆಯ ಧೈರ್ಯ ನೀಡಲೆಂದೋ


ಬೆಳಗಾಯಿತೆಂದು ಚಿಲಿಪಲಿಗುಟ್ಟಿದವು ಖಗಲೋಕದ ಚರ

ಮುದುಡಿದಾ ಪುಷ್ಪಗಳು ಮೊಗವರಳಿಸಿ ನಕ್ಕಿತು ನೋಡ

ಪೈರ ತೆನೆಗಳು ತೂಗಿ ಉಣಬಡಿಸಲು ನಿಂತವು ಸಾಲುಸಾಲಾಗಿ

ಸಾಗರಕೆ ದೋಣಿಯ ನೂಕಿದನು ನಾವಿಕನು ನವಿರಾಗಿ 

ಸಂಕ್ರಮಿಸಿದ ಸೂರ್ಯ ಸಂಭ್ರಮದಿ ಮಕರಕ್ಕೆ ಮರುಕಳಿಸಿ

ಉತ್ತರೋತ್ತರದ ಉನ್ನತಿ ಪುಣ್ಯ ಕಾಲಕೆ ಜಾಣ ಮಂಗಳ  ನಾಂದಿ.  


ಶಿಶಿರದ ಇಬ್ಬನಿಯು ಕರಗದೆಯೆ ಮಂಜಾಗಿ

ಮಾಗಿಯ ಬಿಸಿಗೆ ಉರುಗ ತಾ ಮೈಯೊಡ್ಡಿ

ಎಳ್ಳು ಬೆಲ್ಲಗಳೆಲ್ಲ ಬೆರೆತು ಸಮಾಗಮವಾಗಿ

ಕಬ್ಬಿನ ಸಿಹಿ ಸಹಿತ ಸಕ್ಕರೆಯ ಅಚ್ಚು ಅಕ್ಕರೆಯಾಗಿ

ಬಾಯ್ತುಂಬ ಇಂಪಾದ ಒಳ್ಳೆ ಮಾತುಗಳಾಡೆ

ಸಂಕ್ರಾತಿ ಸಂಭ್ರಮವು ಬರಲಿ ಮನೆ ಮನಗಳಲಿ॥

  • ನಾ ಶ್ರೀ ಮೋ 

Comments

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

Bike ride in Thailand

Deepavali Reflections: King Bali and the Spirit of Righteousness

A trip down the memory lane

Sixty - retired?

Being bald

REML Himalayan Bike

My first long Motorbike ride