ಇದೇನುಗಾದಿ?

 

🔊Audio link

ಕಾಲಕೆಲ್ಲಿ ಆದಿ ಇಹುದೊಎಲ್ಲಿಹುದೋ ಅಂತ್ಯವು।

ನಿತ್ಯ ನೂತಸತತ ಉರುಳುಇದುವೆ ಕಾಲ ಚಕ್ರವು।

ಮಾನದಂಡವಾವುದದು ಕಾಲ ಕಳೆದು ಅಳೆವುದು।

ದಿನವನೆಣಿಸಿ,ಋುತುವ ಘಟಿಸಿ ನಿಂತಿದೇ ಯುಗಾದಿಯು॥


ವರುಷಕೆಲ್ಲ ಬರುವುದೊಮ್ಮೆ ಚಿಗುರೊಡೆವ ಸತ್ಯವು।

ಹಳೆದೆಲ್ಲ ಮಾಸಿ ಉದುರಿಹೊಸದು ಹೊಳೆದು ಬರುವುದು।

ಹಸಿರು ಹಚ್ಚಿ ಬಣ್ಣಕಟ್ಟಿ ಮಾಡುವದದು ಮೋಹಕ।

ಇದಕೆ ಹೆಸರನಿಟ್ಟು ಸಂಭ್ರಮಿಸಿದೆ ಇದೇ ಇಂದುಗಾದಿಯು॥

 

ಮಾವ ಕಿತ್ತೆ ತೋರಣಕೆ ತೋರಲೆನ್ನ ಉತ್ಸವ।

ಬೆಲ್ಲಕೆಲ್ಲ ಬೇವ ಬೆರಿಸಿಯುಂಡು ಕಂಡೆ ಸತ್ಯವ।

ಕಷ್ಟಸುಖವು ಬರುವುದೆಂದು ಕಾಲ ಚಕ್ರ ಪಥದೊಳು।

ಸಮಚಿತ್ತದಿ ಸವಿಯಬೇಕು ಇದೇ ಮಂತ್ರ ಯುಗಾದಿಯು॥


ಅಂತ್ಯವಿಲ್ಲ ಆದಿಯಿಲ್ಲ ನಡೆಯಲಿ ಜೀವನದ ಸಾರ್ಥವು।

ಬೀಡು ಬಿಟ್ಟು ವಹಿವಾಟು ನಡೆದು ಸಾಗುವುದು ಜೀವನಾಟವು।

ಸೋಲು ಗೆಲವು ಖಚಿತವಿಹುದೆಂದು ತಿಳಿದು

ಆಟದಲ್ಲಿ ಆನಂದಿಸೆ ಜಾಣನ ಯುಗಾದಿಯು॥

- ನಾ ಶ್ರೀ ಮೋ

Comments

Popular posts from this blog

Those Three months in 2022

Those months after ...

My Brother’s friend

Bike ride in Thailand

Deepavali Reflections: King Bali and the Spirit of Righteousness

A trip down the memory lane

Sixty - retired?

Being bald

REML Himalayan Bike

My first long Motorbike ride