ತ್ರೇತಾಯುಗಪುರುಷ

 


ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ

ಪಿತೃವಾಕ್ಯಕೆ ಮಣಿದ ಮರ್ಯಾದೆ ಪುರುಷ

ಸತಿ ಭ್ರಾತೃ ಮಾತೃಗಳ ಸಂಕಷ್ಟದಲಿರಿಸಿ

ಪ್ರಜಾಪಾಲನೆಯಿಂಪಲಾಯನಗೈದ

ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ


ರಾಜ್ಯವನಾಳುವನೊಲ್ಲೆಂದೆನುತ

ಕಾಡಿಗೋಡಿದೆ ನೀನೆಲ್ಲ ತ್ಯಜಿಸಿ

ಪಾದುಕೆಗಳನಿತ್ತು ಪರೋಕ್ಷದಿ ಆಳ್ದೆ

ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ


ಕಪಿಯೀರ್ವರ ಜಗಳದೊಳು ನೀ ಜಿಗಿದು

ಹಾತೊರೆದು ಸತಿಯ ಹುಡುಕಲು ಹವಣಿಸಿ 

ಕೊಂದೆನೀನಡಗಿ ವಾಲಿಯನು 

ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ


ಸತಿಯ ರಕ್ಷಣೆ ಎಂದು 

ರಾಕ್ಷಸ ರಾವಣ ಕೊಂದೆ

ಶಂಕಿಸಿ ಸತಿಯನಗ್ನಿ ಸಾಕ್ಷಿಯಿರಿಸಿ ಪಡೆದೆ

ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ


ಆಲಿಸಿ ಓರ್ವ ಅಗಸನ ಮಾತುಗಳ

ತ್ಯಜಿಸಿದೆ ತಾಯಾಗುವ ಸತಿಯ

ಚಿನ್ನ ಪುತ್ತಳಿಯ ಪಕ್ಕ ಇರಿಸಿ ಅಶ್ವಮೇಧಕೆ

ಇರಲೆಲ್ಲ ಜಾಣತನ ನಿನ್ನ ತ್ರೇತಾಯುಗಕೆ

- ನಾ ಶ್ರೀ ಮೋ


ಇದು ಅವಹೇಳನೆಯಲ್ಲ - ಕ್ಷಮೆಯಿರಲಿ. 
ಒಬ್ಬ ವ್ಯಕ್ತಿಯ ವಿಶ್ಲೇಷಣೆ.
ಹೀಗೇಕೆ ಎಂಬ ಕುತೂಹಲ!




Comments

  1. Interesting that while Sita is the narrator and heroine, I also thought more about Rama as I read thru the book!

    ReplyDelete
    Replies
    1. Yes. Uttarakanda is a powerful narration and from Sita's POV

      Delete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

A trip down the memory lane

Sixty - retired?

Deepavali Reflections: King Bali and the Spirit of Righteousness

Being bald

REML Himalayan Bike

My first long Motorbike ride

A Lesson learnt in a bike ride