ಚುನಾವಣೆ

 




ಆಳುವವರು ಬೇಕೆಮಗೆ ಆಳುವವರು

ಆಂಗ್ಲರು ತೊಲಗಿ ಸ್ವಾತಂತ್ರ ಬಂದರೂ

ಆಳುವವರು ಬೇಕೆಮಗೆ ಆಳುವವರು


ಗುಲಾಮಗಿರಿ ಮಾಡಿ ‌ಸ್ವಾತಂತ್ರದ ಛಲಮರೆತು

ಆಳಾಗ ಬಯಸಿ ಆಳುವವರ ಹಿಂಬಾಲಿಸಲು

ಆಳುವವರು ಬೇಕೆಮಗೆ ಆಳುವವರು


ಐದುವರುಷಕ್ಕೊಮ್ಮೆ ದರುಶನವನೀವ

ಐದುವರುಷದಲಿ ಮೇಯ್ದು ಕೊಬ್ಬುವ

ಆಳುವವರು ಬೇಕೆಮಗೆ ಆಳುವವರು


ಪಾದಯಾತ್ರೆಭಾಷಣಗಳ ಮಾಡಿ

ಇನ್ನೈದು ವರುಷ ತಾ ಪೂಜಾರ್ಹನೆಂಬ

ಆಳುವವರು ಬೇಕೆಮಗೆ ಆಳುವವರು


ಆಳಾಗುವೆ ನಿಮಗೆ ನಾನೆಂದು ನಕ್ಕು ನುಡಿದು

ಚಿಕ್ಕ ರೊಕ್ಕವನ್ನು ನಮಗೆ ನೆಕ್ಕಿಸುವ

ಆಳುವವರು ಬೇಕೆಮಗೆ ಆಳುವವರು


ಕೆಂಬಣ್ಣ ದೀಪ ಹೊತ್ತು ಸೈರನ್ನಿನ ಕಹಳೆಯೂದಿ

ಸರಕಾರದ ಕಾರಿನಲ್ಲಿ ರಕ್ತಕಾರುತ್ತ ರಂಜಿಸುವ

ಆಳುವವರು ಬೇಕೆಮಗೆ ಆಳುವವರು


ಯೋಜನೆಗಳೆಂದು ದುರಾಲೊಚನೆ ಮಾಡಿ

ಕಪ್ಪು ಹಣವನಿಲ್ಲಿ ಅಲ್ಲಿ ಕೂಡಿಡುವ

ಆಳುವವರು ಬೇಕೆಮಗೆ ಆಳುವವರು


ನಮ್ಮಂತಹ ಪ್ರಜೆಗಳಿಗೆ ಪ್ರಭುವಾಗಿ ಮೆರೆಯಲು

ಪ್ರಜಾಪ್ರಭುತ್ವದ ಸೋಗುಹಾಕಿ ಕುಣಿಸುವ

ಆಳುವವರು ಬೇಕೆಮಗೆ ಆಳುವವರು


ಕೋಮು ಬೆಳಿಸಿ ಹಗೆಯ ಹೊಗೆಯ ತುಂಬಿ

ಹಗರಣಗಳ ಮಾಡಿ ನಮ್ಮನ್ನಳುಸುವ

ಆಳುವವರು ಬೇಕೆೇ ಜಾಣ, ನಮಗೆ ಆಳುವವರು?

Comments

  1. Sathyavada maatu.
    Yeshte aadroo gulamagiri rakhta dalli haridu bandide

    ReplyDelete
  2. ಸರಿಯಾಗಿ ಹೇಳಿದಿರ

    ReplyDelete
  3. ತುಂಬಾ ಸೊಗಸಾಗಿದೆ.ಇದು ಅಕ್ಷರಶಃ ಸತ್ಯ.ಆದರೆ ಇದಕ್ಕೆ ಪರಿಹಾರವೇನಾದರು ಇದೆಯಾ?ಬ್ರಿಟೀಷರ ನ್ನು ತೊಲಗಿಸಲು ಮಾಡಿದಂತಹ ಸ್ವಾತಂತ್ರ ಚಳುವಳಿಯಂತೆ ಏನಾದರೊಂದು ಉಘ್ರ ಹೋರಾಟ ನಡೆಯಬೇಕು.ನಮ್ಮ ಚುನಾವಣೆ ವ್ಯವಸ್ಥೆ ಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು.ನಮ್ಮ ಜೀವಿತಾವದಿಯಲ್ಲಿ ಸಾದ್ಯವಿಲ್ಲ ಎಂದು ನನ್ನ ಭಾವನೆ.

    ReplyDelete
  4. Thoomba Chenagede 👏

    ReplyDelete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

Bike ride in Thailand

Deepavali Reflections: King Bali and the Spirit of Righteousness

A trip down the memory lane

Sixty - retired?

Being bald

REML Himalayan Bike

My first long Motorbike ride