ಎಂತಹ ಚೆಲುವು?
ಅದೇ ಬೆಟ್ಟ ಅದೇ ಕಣಿವೆ
ಸ್ಥಿರವೆಲ್ಲವೀ ಜಗವು|
ಜಗದ ಜಂಗಮಕೆ
ರವಿಯ ಕಾಂತಿ॥
ಅದೇ ಬೆಳಕು ಅದೇ ಛಾಯೆ
ದಿನ ದಿನಕೆ ಬರುವುದು|
ಸ್ಥಾವರದ ಸಾಗರಕೆ
ಭುವಿಯ ಶಾಂತಿ
ಅದೇ ಉಸಿರು ಒಳಹೊರಗು
ಮನದ ವಿಪ್ಲತೆಯು|
ಬಹು ಭಾರವೀಮನಕೆ
ಕವಿಯ ಭ್ರಾಂತೀ
ಅದೇ ಅಕ್ಷರ ಪದಗಳೋ
ಪದ ಪೋಣಿಸುವಾಟ|
ಕವಿಯ ಕಲ್ಪನೆಗೆದರಿ
ಆದ ಜಾಣ ವೇದಾಂತಿ
- - ನಾ ಶ್ರೀ ಮೋ

Experience of beauty though momentary stays forever?
ReplyDeleteAbsolutely
DeleteYour kavithe is appropriate to the nature
ReplyDeleteSurendranath
Thanks Surendranath
DeleteV true and beautifully exoressed. Keep it up
ReplyDeletebahala chennagide
ReplyDeleteThanks
Delete