ಫೋಟೋ

 



ಹಳೆಯ ಫೋಟೋ ನೋಡುತ್ತಿದ್ದೆ

ಬಾಲ್ಯಹರಯಯೌವನಗಳ

ಹಳೆಯ ಫೋಟೋ ನೋಡುತ್ತಿದ್ದೆ॥


ಫೋಟೋದಲ್ಲಿನ  ಕಣ್ಗಳು

ಅದೆಶ್ಟು ಹೊಳಪು ಅದೆಂತಹ ನಗು।

ಕಪಟವಿಲ್ಲದ ಮುಗ್ಧತೆಯು

ಹಳೆಯ ಫೋಟೋ ನೋಡುತ್ತಿದ್ದೆ॥


ನೋಡಿದೆ ನಾನು ನಲಿವ ಬಾಲ್ಯವ

ತುಂಟ ನಗುವು ಹುರುಪು ಬಹಳ।

ಫ್ರೇಮಿನಿಂದಾಚೆ ಜಿಗಿದುಬಿಡುವ

ಹಳೆಯ ಫೋಟೋ ನೋಡುತ್ತಿದ್ದೆ॥


ಚಿಗುರು ಮೀಸೆ ಅಛಲ ಛಲವು

ದಿಟ್ಟತನದ ಯುವಕನೊಬ್ಬ।

ಕ್ಯಾಮರವನ್ನೇ ಸುಡುವಂತಿದ್ದ 

ಹಳೆಯ ಫೋಟೋ ನೋಡುತ್ತಿದ್ದೆ॥


ನೋಡ ನೋಡುತ್ತ ನಿಟ್ಟುಸಿರ ಬಿಟ್ಟೆ

ಕನ್ನಡಕವ ಸರಿಸಿ ತೆಗೆದೆ।

ಒರೆಸಿ ಮತ್ತೆ ತಗುಲಿಹಾಕಿದೆ

ಈಗೆಲ್ಲ ಸುತ್ತ ಬಹಳ ಸ್ಪಷ್ಟ॥


ನನ್ನ ಎದುರು ಕನ್ನಡಿಯೊಂದು

ನಾನದನು ನೋಡಿರಲಿಲ್ಲ।

ತಟ್ಟನೆ ಕಂಡಿತೊಂದು ಮುದಿ ಮುಖವು

ಬೆಚ್ಚಿ ಬಿದ್ದು ನೋಡಿದೆ ಅವನ॥


ಅವನೆ ನಾನೆಂದು ತಿಳಿದೊಡೆ

ನೋಡಿದೆ ನಾ ಚದುರಿದಾ ಪಟಗಳ।

ಹರಿದು ಹೋದ ಬಾಲ್ಯಹರಯಯೌವನಗಳ

ಹಳೆಯ ಫೋಟೋ ನೋಡುತ್ತಿದ್ದೆ॥

  • ನಾ ಶ್ರೀ ಮೋ

Comments

  1. Sakkattagide 🙏🙏 bahala dinada nantara Uttamavada kavana moodibandide

    ReplyDelete
  2. Well written! But tomorrow when you look at the same mirror, you will the see the face of a mature likeable young (UN says 60 is young) man..

    ReplyDelete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

A trip down the memory lane

Sixty - retired?

Deepavali Reflections: King Bali and the Spirit of Righteousness

Being bald

REML Himalayan Bike

My first long Motorbike ride

A Lesson learnt in a bike ride