Hole in one - Kishan
A Golfing friend of mine from Eagleton, Kishan (Srikrishna) penned this nice Hole in one poem in kannada. Publishing this with his permission.
🔊Click here for Audio recitation
ಇದು ಮೂರು ಹೊಡೆತದಾಟ।
ಟೀ ಬಾಕ್ಸ್ ಗೆ ಹೋದ ಕಿಟ್ಟ।
ಬಗ್ಗಿ ಚುಚ್ಚಿ ಚಿಕ್ಕ ಟೀಯ ನೆಟ್ಟ।
ಚಂಡು ಒಂದು ಚಂದ್ರ ಪುಟ್ಟ।
ಆ ಚಂಡನದರ ಮೇಲೆ ಇಟ್ಟ॥
ಟೀ ಬಾಕ್ಸ್ ಗೆ ಹೋದ ಕಿಟ್ಟ।
ಬಗ್ಗಿ ಚುಚ್ಚಿ ಚಿಕ್ಕ ಟೀಯ ನೆಟ್ಟ।
ಚಂಡು ಒಂದು ಚಂದ್ರ ಪುಟ್ಟ।
ಆ ಚಂಡನದರ ಮೇಲೆ ಇಟ್ಟ॥
ರಂದ್ರ ೨೦೦ ಯಾರ್ಡಿಗೆ।
ಕಣ್ಣು ಬಿತ್ತೈರನ್ ಆರಿಗೆ।
ಕಾಲಗಲಿಸಿ ಧೀರ ನಿಂತ।
ಹೊಡೆದ ಬಹು ವಿಶ್ವಾಸದಿಂದ।
ತೇಲಿ ಹಾರಿಸಿದಾ ಚಂಡ॥
ಗ್ರೀನ್ಗೆ ಬಿದ್ದು ರಭಸದಿಂದ।
ರಂದ್ರ ದಾಟಿ ಮೆಲ್ಲ ನಿಂತು।
ಮರುಕಳಿಸಿ ಹೊರಳಿ ಬಂತು।
ಮೆಲ್ಲ ರಂದ್ರದೊಳಗೆ ಬಿದ್ದು!
'ಹೋಲ್-ಇನ್-ಒನ್' ಆಯಿತು!
ನೆರೆದ ಕ್ಯಾಡಿ ಕೇಕೆಗೆಗೆ
ನಮ್ಮ ಕಿಟ್ಟ ಕಿರುನುಗೆ,
ಕಣ್ಣೀರು ತುಂಬಿಬಂತು
ಆನಂದ ಬಾಷ್ಪದೊಂದಿಗೆ॥
- ಶ್ರೀಕೃಷ್ಣ
Very nice. I did get it. But not in this form.
ReplyDelete