दर्द - ನೋವು -Pain
Please click here for the recitation Har dard ki tasvir nahi hoti, chhipa hota hai muskan ke peeche, har muskan ki wajeh khushiya hi nahi dard bhi hota hai, muskan ki tasveer to le yaado ke liye yadon ki keemat bahut hoti - NSM ನೋವು. ನೋವಿಗೆಂತಹ ಕನ್ನಡಿ, ನೋವಿಗೆಲ್ಲಿಯ ಫೋಟೋ? ನೋವಡಗಿಹುದು ಅಂತರಾಳದೊಳು ಎಲ್ಲೋ ಹದುಗಿ। ಹುಗಿ ನೀನು, ಹೊರ ತೋರದಿರು ಅದನು ಎಲ್ಲರಿಗೆ ಅಡಗಿರಲಿ ಅದು ಒಳಗೇ, ನಗೆಯ ಮುಖವನು ತೋರು। ನೋವು ನಿನ್ನಯಾನುಭವ, ನಿನಗದು ಸೀಮಿತವು ಹಂಚಿ ಹರಡಲಾಗದು, ನೋವು ನೋಡು। ನಗುವ ನೋಡುವರು ಅವರು ನೋಡಿ ನಗುವರು ಎಲ್ಲ ಹಂಚಿ ಹರಡೂ ನೀನು ನಿನ್ನ ನಗೆಯ ಹೊನಲು ಭಾವ, ಛಾಯಾ ಚಿತ್ರ ಸೆರೆ ಹಿಡಿಯುವವು ಕ್ಷಣದಲ್ಲಿ ನಿನ್ನ ಇಂದಿನ ನಗು ಮೊಗವ ಮುಂದೊಮ್ಮೆಗೆ। ಬೆಳಕಿಗೇ ಬೆಲೆಯುಂಟು, ಕತ್ತಲಿಗೆ ಬೆಲೆಯಿಲ್ಲ ಬೆಳಕು ಬದುಕಿನ ಆಟ, ಬೇಡ ಅದಲುಬದಲು। ನಗುವಿಗೇ ಬೆಲೆಯು, ನಂಟ ಸ್ನೇಹಕ್ಕೆ ಅದು ಬಲೆಯು ಬರ ಸೆಳೆದು ಸರಪಳಿಯ ಕಟ್ಟಿಡುವುದು ಸುತ್ತಮುತ್ತ ನೋವಿರಲಿ ನಿನ್ನಲ್ಲಿ, ನಗುತ ನೀ ಬಾಳುತಿರೆ ಜಾಣ ನೀನಾಗುವೆ ಜನರ ಈ ಭುವಿಯಲ್ಲಿ॥ - ನಾ ಶ್ರೀ ಮೋ