दर्द - ನೋವು -Pain



Please click here for the recitation

Har dard ki tasvir nahi hoti,

chhipa hota hai muskan ke peeche,

har muskan ki wajeh khushiya hi nahi dard bhi hota hai,

muskan ki tasveer to le yaado ke liye 

yadon ki keemat bahut hoti


- NSM



ನೋವು.  


ನೋವಿಗೆಂತಹ ಕನ್ನಡಿ, ನೋವಿಗೆಲ್ಲಿಯ ಫೋಟೋ?

ನೋವಡಗಿಹುದು ಅಂತರಾಳದೊಳು ಎಲ್ಲೋ ಹದುಗಿ।

ಹುಗಿ ನೀನು, ಹೊರ ತೋರದಿರು ಅದನು ಎಲ್ಲರಿಗೆ

ಅಡಗಿರಲಿ ಅದು ಒಳಗೇ, ನಗೆಯ ಮುಖವನು ತೋರು।


ನೋವು ನಿನ್ನಯಾನುಭವ, ನಿನಗದು ಸೀಮಿತವು

ಹಂಚಿ ಹರಡಲಾಗದು, ನೋವು ನೋಡು।

ನಗುವ ನೋಡುವರು ಅವರು ನೋಡಿ ನಗುವರು ಎಲ್ಲ

ಹಂಚಿ ಹರಡೂ ನೀನು ನಿನ್ನ ನಗೆಯ ಹೊನಲು


ಭಾವ, ಛಾಯಾ ಚಿತ್ರ ಸೆರೆ ಹಿಡಿಯುವವು ಕ್ಷಣದಲ್ಲಿ

ನಿನ್ನ ಇಂದಿನ ನಗು ಮೊಗವ ಮುಂದೊಮ್ಮೆಗೆ।

ಬೆಳಕಿಗೇ ಬೆಲೆಯುಂಟು, ಕತ್ತಲಿಗೆ ಬೆಲೆಯಿಲ್ಲ

ಬೆಳಕು ಬದುಕಿನ ಆಟ, ಬೇಡ ಅದಲುಬದಲು।


ನಗುವಿಗೇ ಬೆಲೆಯು, ನಂಟ ಸ್ನೇಹಕ್ಕೆ ಅದು ಬಲೆಯು

ಬರ ಸೆಳೆದು ಸರಪಳಿಯ ಕಟ್ಟಿಡುವುದು ಸುತ್ತಮುತ್ತ

ನೋವಿರಲಿ ನಿನ್ನಲ್ಲಿ, ನಗುತ ನೀ ಬಾಳುತಿರೆ

ಜಾಣ ನೀನಾಗುವೆ ಜನರ ಈ ಭುವಿಯಲ್ಲಿ॥

- ನಾ ಶ್ರೀ ಮೋ

Comments

Popular posts from this blog

Those Three months in 2022

Those months after ...

My Brother’s friend

A trip down the memory lane

Sixty - retired?

Deepavali Reflections: King Bali and the Spirit of Righteousness

Being bald

REML Himalayan Bike

My first long Motorbike ride

A Lesson learnt in a bike ride