ಮರೆಯಲಾರದ ಹಾಡು

Click here for audio recitation


ಅದೇಕೋ ಈ ಮುಂಜಾನೆ

ನನಗೇ ಅರಿವಿಲ್ಲದೆಯೆ

ಮನಹೊಕ್ಕು ಸುಳಿದಾಡಿತು

ಮರೆಯಲಾರದ ಹಾಡು||


ಹಾಡಿನ ಭಾವವೋ

ಅದರ ಒಳಾರ್ಥವೋ

ಹಾಡಿದಾ ಮೋಹಕ ದನಿಯೋ

ಹೇಗೆ ನುಸಿಳಿತೋ ಏನಗೆ ತಿಳಿಯದೆಯೆ||


ಹೊರದೂಡಲಿಚ್ಚಸದೆಯೆ

ಮೆಲಕು ಹಾಕುತ್ತಿದ್ದೆ ಮನದೊಳು

ಕೇಳಲಸ್ಪಶ್ಠ ಮೆಲುದನಿಯೊಳು

ಕೇಳುತ್ತಿದ್ದವು ಕಿವಿ, ಕಿವಿಗೊಡದೆಯೆ||


ಸಾಗರದಾಲೆಗಳಂತೆ ಮರುಕಳಿ ಬರುತಿಹವು

ತನ್ನ ಛಂದಿಸ್ಸಿನ ಛಾಪವನು ಮೂಡುತ್ತ

ಋುತುಗಳಾ ಸಮಯ ನಿಖರತೆಯಲಿ

ಮತ್ತೊಮ್ಮೆ ಮಗದೊಮ್ಮೆ ಹೊರಹೊರಳಿಸಿ||


ಕಾಡುತಿಹುದೇಕೊ ಸುಮ್ಮನಿರಗೊಡದೆ

ಶಾಂತತೆಯ ತೋರಿ ಚಲನಕ್ರಿಯೆಯೂ ಆಗಿ

ನೆಮ್ಮದಿಯ ನೀಡುತ್ತ ನಿಶ್ಕ್ರಿಯೆಯು ಆಗಿಸದೆ

ತಂಗಾಳಿಯಂತಾಗಿ ಬಿರುಗಾಳಿಬೀಸುತಿದೆ||


ಅದೇಕೋ ಈ ಮುಂಜಾನೆ

ನನಗೇ ಅರಿವಿಲ್ಲದೆಯೆ

ಮನಹೊಕ್ಕು ಸುಳಿದಾಡಿತು

ಮರೆಯಲಾರದ ಹಾಡು||

  • ನಾ ಶ್ರೀ ಮೋಹನ

Comments

  1. ತುಂಬಾ ಚೆನ್ನಾಗಿದೆ

    ReplyDelete
  2. Very nice.
    Some tunes are messmarising.
    They really hunt you.

    Very well spoken

    ReplyDelete
    Replies
    1. Yes, Shankaranna - what triggered this was a famous song "Shivappa kaayo thande, mooru loka swami deva ...."

      Delete
  3. You are extremely talented kavi!!

    Looking forward to the Next one

    ReplyDelete
    Replies
    1. Oh Thanks. Not a student of literature - just write what comes to mind.

      Delete
  4. Nice👍👏👏

    ReplyDelete
  5. ತುಂಬಾ ಚೆನ್ನಾಗಿದೆ.
    ನಿಜಕ್ಕೂ ಇದು ಎಲ್ಲರಿಗೂ ಅನುಭವ ಆಗಿರುತ್ತದೆ

    ReplyDelete
  6. ಮನಸಿನ ಕಿಟಕಿ ತೆರೆಯುವನು ಭಾಗ್ಯಶಾಲಿ

    ReplyDelete
  7. ತುಂಬಾ ಅರ್ಥಪೂರ್ಣ ಮತ್ತು ಚೆನ್ನಾಗಿದೆ. ಈ ರೀತಿ ಹಲವುಬಾರಿ ಹಳೆಯಹಾಡುಗಳು ಮನದಲ್ಲಿ ಮೂಡುವುದು, ಗುನುಗುವುದನ್ನು ಈ ಕವಿತೆ ಚೆನ್ನಾಗಿ ಬಣ್ಣಿಸಿದೆ 👌

    ReplyDelete
    Replies
    1. ಧನ್ಯವಾದಗಳು ತೋಂಟೇಶರೆ

      Delete
  8. Wonderful.ಪ್ರಾಸಬಧ್ಧವಾಗಿದೆ.

    ReplyDelete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

Bike ride in Thailand

Deepavali Reflections: King Bali and the Spirit of Righteousness

A trip down the memory lane

Sixty - retired?

Being bald

REML Himalayan Bike

My first long Motorbike ride