ಪ್ರತಿಬಿಂಬ

 

ಚಿತ್ರ ಕೃಪೆ: ಶ್ರೀ ಹರ್ಷ ಶಂಕರನಾರಾಯಣ

ಗಗನ ಚುಂಬಿತ ಪರ್ವತಶೃಂಗ
ಶೃಂಗಕಂಟಿದ ನೀಲಿಯ ರಂಗ
ರಂಗನು ಅಣುಕಿಸುವ ಪ್ರತಿಬಿಂಬ॥

ಬಿಂಬವೇನ್ಹುಸಿಯೋ ಬಿಂಬವು ಸತ್ಯ
ಸತ್ಯಕೇನು ಸರಿಸಾಟಿಯ ಮಿತ್ಯ
ಮಿತ್ಯವಿದಾದರೆ ಸತ್ಯವದೆಲ್ಲಿ?

ಇಲ್ಲಿಯ ನೋಟವು ಮನದಿ ಭ್ರಮೆಯೋ
ಭ್ರಮೆ ಇದಾದೊಡೆ ಮೂಲವ ಹುಡುಕೆ
ಹುಡುಕುವುದೆಲ್ಲಿ ಬಾನೋ ಮನವೋ॥

ಮನದಲಿ ಶಾಂತಿಯ ತಿಳಿ ತಿಳಿ ನೀರು
ನೀರದು ಕದಡದೆ ನಿಲ್ಲಲು ಸ್ಥಿರವು
ಸ್ಥಿರ ನೀ ಜಾಣ ಮಾಯೆಯ ಕಾಣೋ॥

- ನಾ ಶ್ರೀ ಮೋ

Comments

  1. Raxit, our son-in-law, once took me on a trek to photograph a still lake early in the morning. It was beautiful but soon the wind created small ripples. The stillness was momentary! Butb it was worth the effort.

    ReplyDelete
    Replies
    1. Yes, that stillness, even if for a moment creates reflections - be it in the lake or in our mind.

      Delete
  2. Pradeep Nagamangala8 December 2024 at 09:19

    Reflections are mirror images which float in the tranquility of nature

    ReplyDelete
  3. ಚಿತ್ರದಲ್ಲಿನ ಬಿಂಬಕ್ಕೆ ಕವಿ ಮನದ ಒಗ್ಗರಣೆ
    ಸರಿಸಾಟಿ ಇಲ್ಲದ ಅಮೋಘ ವಿವರಣೆ
    ದೃಶ್ಯ ಮನಬಿಚ್ಚಿ ಹೇಳಲಾಗದ್ದನ್ನು
    ಬಿಡದಾಯಿತು ಗುಟ್ಟಾಗಿರಿಸಲು ಕವಿಯ ಮನವನ್ನು.

    ನಿಮ್ಮ ಕವನ ತುಂಬಾ ಚೆನ್ನಾಗಿದೆ. ಹೀಗೆ ಮುಂದುವರೆಯಲಿ.

    ಶ್ರೀಧರ್ ಬಾಪಟ್

    ReplyDelete
    Replies
    1. ಧನ್ಯವಾದಗಳು ಶ್ರೀಧರ್‌

      Delete
  4. ಅಧ್ಬುತ ಕವನ, ಚೆನ್ನಾಗಿ ಮೂಡಿ ಬಂದಿದೆ

    ReplyDelete
    Replies
    1. ನಿಮ್ಮ ಕವನ ರಚನೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ
      Raghavendra V

      Delete
  5. Soooper.. ತುಂಬಾ ಚೆನ್ನಾಗಿದೆ

    ReplyDelete
  6. Unusual, but Brilliant!

    ReplyDelete

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend