ಸಂಬಂಧಗಳು

 

AI generated image


ನೆನ್ನೆಯ ತನಕ ಘಾಡವಿದ್ದು
ಇಂದೇಕೆ ದೂರ ಸರಿದೆ?
ನನ್ನಲೇನು ಹುಳುಕ ಕಂಡೆ
ಸ್ನೇಹ ಬಳ್ಳಿಯ ನೀನೇಕೆ ಕಡಿದೆ?
ಮೌನವೇಕೆ ತಿಳಿಯಹೇಳು
ಹೇಳಲೇಕೆ ನನ್ನಲ್ಲಿ ಬಿಗುವು
ನಕ್ಕು, ಅತ್ತ ದಿನವ ನೆನೆದು
ನೀನಳುಕ ಪದರ ಹರಿದು ಬಿಚ್ಚು॥
ತಪ್ಪು ನನ್ನದೆ ಇರಲುಬಹುದು
ಅದರ ಅರಿವು ನನಗೆ ಇರದು
ಮೌನವೆಲ್ಲಿ ಇದಕೆ ಮದ್ದು
ತೆರೆದು ನೀನೇ ಹೇಳಬಹುದು॥
ಸ್ನೇಹ ಹೂವಿಗೆಂತಹ ಮುಳ್ಳು?
ಈ ಕೋಪವಿರಬಹುದೆ ಸುಳ್ಳು?
ಅರಿವುದೆಂತು ತಿಳಿವುದೆಂತು?
ಬಿಚ್ಚಿ ನೀನು ಮಾತನಾಡು॥

ತೇಲಿ ಹೋಗಿಹೆ ದಿಕ್ಕು ಬೇರೆ
ಸೇರತೊಡಗಿದೆ ಬೇರೆ ದಡಕೆ
ಭಾರವಾಗಿ ಮುಳುಗಿ ಹೋಗಿಹೆ
ಕತ್ತಲಲ್ಲಿ ಕಲೆತು ಕರಗಿಹೆ॥
ಹಳೆಯ ನೆನಪಿನ ಸೆಳೆಯ ಪಾಷ
ಮಾಡದಿರಲಿ ಈ ನಂಟ ನಾಶ
ದಾರ ಕೀಳಲು ಪಟವು ಹಾರಲಿ
ದಿಗಂತದಾಚೆ ಹೋಗಿ ಸೇರಲಿ॥
ನೇನಪು ಉಳಿಯಲಿ ಚಿತ್ರಪಟದಲಿ
ನಕ್ಕು ನಲಿದ ಕ್ಷಣವು ಮೂಡಲಿ
ಮೆಲಕು ಹಾಕುವೆ ನಾ ಒಂಟಿಯಾಗಿ
ಜಾಣ, ನೆನೆಪು ಮರೆಯಲಿ ಹಗುರವಾಗಿ॥

Comments

Post a Comment

What is your opinion please comment here

Popular posts from this blog

Those Three months in 2022

Those months after ...

My Brother’s friend

A trip down the memory lane

Sixty - retired?

Being bald

REML Himalayan Bike

My first long Motorbike ride

Confessions of a father

Graduation ceremony