ಮರಳಿತೋ ಯುಗಾದಿಯು
ಹಳೆಯ ಹಳಿತ ಕಹಿಯ ನೆನಪು,
ಹೊಸ ಹೊಸೆದ ಸಿಹಿಯ ಹುರುಪು
ತಂದಿತು ಯುಗಾದಿಯು।
ಉರುಳಿ ಕಾಲ ಸತತವಾಗಿ
ಮರಳಿತೋ ಯುಗಾದಿಯು॥
ಹಿಂದೆ ತಿರುಗಿ, ಕಳೆದ ನೆನೆದು
ಕಲಿತಲ್ಲಿ ಪಾಠವು।
ಮುಂದಿನಕೆ ಸಿದ್ದ ಮಾಡಿ
ಬಿಚ್ಚಿಟ್ಟ ಗಾಠವು।
ಉರುಳಿ ಕಾಲ ಸತತವಾಗಿ
ಮರಳಿತೋ ಯುಗಾದಿಯು॥
ಕಹಿಯನುಂಡು ಸಿಹಿಯ ಸವೆದ
ಸಂಯಮದ ಆಟವು।
ಮಾವು ಸೇರಿ ಹುಳಿಯನುಂಡ
ಜೀವನದ ಪಾಠವು।
ಉರುಳಿ ಕಾಲ ಸತತವಾಗಿ
ಮರಳಿತೋ ಯುಗಾದಿಯು॥
ಯೋಜನೆಗಳ ಯೋಚನೆಗಳ
ಪಟ್ಟಿ ಸಾಲು ಸಾಲಿಗೆ।
ಕಾಲಕೆಲ್ಲ ಕಾಲ ಹಾಕಿ
ನಡೆವ ಋುತುಚಕ್ರಕೆ।
ಉರುಳಿ ಕಾಲ ಸತತವಾಗಿ
ಮರಳಿತೋ ಯುಗಾದಿಯು॥
ಗ್ರಹದ ಗತಿಯನರಿಯಲಾರೆ
ಗಿತಿಸುವುದು ಕಾಲ ಖಚಿತವು
ಶರಣು ಹೋದೆ ಕಾಲನಡಿಗೆ
ಹಸನ ಕಂಡೆ ತುಳಿತದಿಂದ
ಉರುಳಿ ಕಾಲ ಸತತವಾಗಿ
ಮರಳಿತೋ ಯುಗಾದಿಯು॥
Very nice sir.
ReplyDeleteGood morning sir.
ReplyDeleteHappy new year
Wish a very prosperous and happy new year.
Prey for many more trips 😉
Thanks Shankaranna.
DeleteGood morning Sir,
ReplyDeleteಯುಗಾದಿ ಹಬ್ಬದ ಶುಭಾಶಯಗಳು,
ಯುಗಾದಿ ಹಬ್ಬದ ಕುರಿತ ಕವನ ಚೆನ್ನಾಗಿ ಮೂಡಿ ಬಂದಿದೆ.
Thanks Raghavendra
DeleteHappy Ugadi ! Brilliant one
ReplyDelete👌👏👏👏
ReplyDeleteಸೊಗಸಾದ ಕವನ.
ReplyDeletethanks Satisha
Deleteಯುಗಾದಿ ಹಬ್ಬದ ಶುಭಾಶಯಗಳು. ಕವಿತೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ReplyDeleteವಿಶ್ವಾವಸು ನಾಮ ಸಂವತ್ಸರ ದ ಹಾರ್ದಿಕ ಶುಭಾಶಯಗಳು.
ReplyDeleteದೇವರ ಅನುಗ್ರಹ ಸದಾ ಸಕಾರಾತ್ಮಕವಾಗಿರಲಿ
Thanks Sridhara
Delete