Posts

ಯುದ್ದ

Image
  ಯುಗಯುಗಕೆ ಮರುಕಳಿಸಿಬರುವವು ಯುದ್ಧಗಳು| ಹಗೆತನವೋ, ಅಹಂಕಾರ, ಪ್ರತೀಕಾರದ ನೆಪವು। ಅವರಿಬ್ಬರೂ ನಾಯಕರು, ನಾವು ಹಿಂಬಾಲಕರು| ಆ ಪಕ್ಷವೀ ಪಕ್ಷಕ್ಕೆ ನಾವುಗಳು ಸೇರಿದವರು॥ ಎಂದೂ ಚದುರಂಗಾಟದಲಿ ಸೈನಿಕನಿಗೇನು ಬೆಲೆ? ಬಲಿಕೊಟ್ಟು, ತಗೆದು ಸೇರುವ ಕಾಯಿ ಮೂಲೆ। ಕುದುರೆ, ಆನೆ, ಓಂಟೆ ಅವರಿಗಿಂತಲು ಮೇಲೆ। ಮುನ್ನುಗ್ಗುವ ಒಂದಡಿಯಿನ ಬರಿಯರಚುವ ತಲೆ॥ ಕೊನೆಗೊಮ್ಮೆ ಎಂದೋ ಮುಗಿಯುವುದೀ ಯುದ್ಧ। ಯಾರೊ ಅವರಲಿ ಸೊತ ಮತ್ತೊಬ್ಬ ಗೆದ್ದ। ಹಗೆತನದ ಹೊಗೆ ಹೋಗಿ ಸವರಿದರು ಸ್ನೇಹದ ಮದ್ದು ಕ್ಷೀಣಿಸಿತು ಗದ್ದಲಗಳು, ನಿಂತಿತು ಕಹಳೆಯ ಶಬ್ಧ॥ ಕಾಯುತ್ತಿದ್ದಳು ಮುದಿಯೊಬ್ಬಳು ನೋಡಲು ಸತ್ತ ಮಗನ। ಹರೆಯದ ಹೆಂಗಳು ಹಂಬಲಿಸಿ ಹಾ-ತೊರೆದರು ಹುತಾತ್ಮ ಪ್ರಿಯತಮನ। ತಬ್ಬಲಿಯ ಮಕ್ಕಳು ಕೊಳ್ಳಿಟ್ಟರು ಅಪ್ಪನ ಚಿತೆಗೆ। ಅಂತೂ ಕೊನೆಯಾಯಿತೆ ಈ ಎಲ್ಲ ವ್ಯಥೆಗೆ॥ ಮುಗಿಯಿತು ಈ ಯುದ್ಧ, ಬರಲಿ ಸತ್ತವರಿಗೆ ಸ್ಮಾರಕ। ವರುಷಕ್ಕೊಮ್ಮೆ ನೆನೆದು ಹೂಗುಚ್ಚವಿಡಲಿ ನಾಯಕ। ಮುಗಿಯಿತಲ್ಲ ಸಧ್ಯಕ್ಕೆ ರಕ್ತ, ಕಣ್ಣೀರಿನ ಅಭಿಷೇಕ। ನಾಯಕರು ದೇವರುಗಳು ಅವ ಜಾಣ ನಮ್ಮ ಪೋಷಕ॥ - ನಾ ಶ್ರೀ ಮೋ

ಕರ್ಮ ಕಾಲಚಕ್ರ

Image
  🔊 Click here for audio recitation ಇದೇನು ವಿಸ್ಮಯವು, ಏನು ವಿಪ ರ್ಯಾಸ ಕಾಲಗಳಲಿ ಎಂದು ಕಾಲ ತೂರುವುದೋ? ಎನ್ನ ಭೂತಗಳೆಲ್ಲ ಇಂದು ವರ್ತಮಾನಗಳಾಗಿ ಭವಿಷ್ಯದ ಮೆಲೆ ಬೆಳಕು ಛಾಯೆಗಳ ಚೆಲ್ಲುತ್ತ ಕಾಲಚಕ್ರವಿದೆಂದು ತಿರುತಿರುಗಿ ತಿರುಗಿಸಿ ಇದೇನು ವಿಸ್ಮಯವು, ಏನು ವಿಪ ರ್ಯಾಸ ಕಾಲಗಳಲಿ ಎಂದು ಕಾಲ ತೂರುವುದೋ? ಭೂತಕಾಲದ ಕಂಥೆಗಳು, ಕಥೆ, ಖಾಂಡಗಳು ಅದನಂದು ಬರೆಯಲು ಅದರ ಪ್ರೇರಣೆಯೇನು? ಅದರ ಹಿಂದಿನ ಕೃತ ನನ್ನ ಅಂದಿನ ಕರ್ಮಗಳೇನು? ಇದೇನು ವಿಸ್ಮಯವು, ಏನು ವಿಪ ರ್ಯಾಸ ಕಾಲಗಳಲಿ ಎಂದು ಕಾಲ ತೂರುವುದೋ? ವರ್ತಮಾನದ ಮಾನದಂಡವು ಅದೇನು? ಮುಂಬರುವದಕೆ ಇದು ನಾಂದಿಯು। ಮುನ್ನಡೆವುದೆಲ್ಲಕೂ ಇದು ಕಾರಣವಾಗೆ ಇದೇನು ವಿಸ್ಮಯವು, ಏನು ವಿಪ ರ್ಯಾಸ ಕಾಲಗಳಲಿ ಎಂದು ಕಾಲ ತೂರುವುದೋ? ಭವಿಷ್ಯವ ಕಳೆತು ಬಲ್ಲವ ನಾನು ಅದು ಇಂದು ನಡೆದ/ರೆಲ್ಲ ಫಲವು ಇಂದು ನಡೆವುದೆಲ್ಲ ನಿನ್ನೆಯ ಕರ್ಮಗಳು ಇದೇನು ವಿಸ್ಮಯವು, ಏನು ವಿಪ ರ್ಯಾಸ ಕಾಲಗಳಲಿ ಎಂದೂ ಕಾಲ ತೂರುವುದು ಜಾಣ ॥ - ನಾ ಶ್ರೀ ಮೋ

ಮರೆವು

Image
🔊 Click here for Audio recitation of the Poem   ಅದೆನಿತು   ದಿನಗಳಾಯಿತು   ಮನೆಯ   ತೊರೆದು ? ಮನದಳಿಸಿಹೋಯಿತೆ   ಹಿಂದಿರುಗುವ   ಹಾದಿ   ಮರೆತು॥ ಇದ್ದ   ಊರು   ಹಳೆತಾಗಿ   ಹೊಸದೆನಿಸದೆ। ಬಿದ್ದಿರುವ   ಜಾಗದಲಿ   ಜಢವಾಗಿ   ಮೈಯೊರಗಿ। ಮುಂದಿನದಕೆ   ಚಿಂತಿಸದೆ   ಇಂದಿನದ   ಮೆಲಕುತ್ತ। ಮನೆಯ   ಮರೆತು   ಇಲ್ಲೇ   ನಾ   ತೂಕಡಿಸುತ। ಅದೆನಿತು   ದಿನಗಳಾಯಿತು   ಮನೆಯ   ತೊರೆದು ? ಮನದಳಿಸಿಹೋಯಿತೆ   ಹಿಂದಿರುಗುವ   ಹಾದಿ   ಮರೆತು॥ ಅಲ್ಲಿರುವ   ಭಂದು   ಅಲ್ಲಿದ್ದ   ಮಿತ್ರನ   ಮರೆತು। ಇಲ್ಲಿಯ   ಕ್ಷಣಕೆ   ಭಾಂದವ್ಯ   ಮೈತ್ರಿಯನು   ಬೆಳಸಿ। ಇದೆೇ   ಶಾಶ್ವತವೆಂದು   ಆನಂದದಿ   ಭ್ರಮಿಸಿ। ಕೆಲ   ಕಾಲ   ತಂಗುದಾಣವ   ನಿಜ   ವಿಳಾಸವೆಂದೆನಿಸಿ। ಅದೆನಿತು   ದಿನಗಳಾಯಿತು   ಮನೆಯ   ತೊರೆದು ? ಮನದಳಿಸಿಹೋಯಿತೆ   ಹಿಂದಿರುಗುವ   ಹಾದಿ   ಮರೆತು॥ ಭ್ರಮರ   ಹೂವೆಲ್ಲವನು   ಮನೆಯೆಂಬುವುದೆ ? ಗೂಡೆಲ್ಲಿಹುದೆಂದು   ತಿಳಿಯದೇನದಕೆ ? ಅಲೆಮಾರಿ   ಅರಸುತ್ತ   ಸಾಂತ್ವವನು   ಹುಡುಕುತ್ತ। ...

ಹೆಜ್ಜೆಗಳು

Image
  🔊 Click here for a video link to the recitation  https://youtu.be/j9feX27UyF8?si=oq_2xy214lRjRfkf ಇಟ್ಟ   ಹೆಜ್ಜೆಗಳೆಷ್ಟೋ     ನಡೆದ   ಪಥಗಳೆನಿತೋ     ಇಟ್ಟ   ಹೆಜ್ಜೆೆಯ   ಮೇಲೆ   ಮತ್ತಿಟ್ಟ   ಹೆಜ್ಜೆಗಳೆಷ್ಟೋ   ಸವೆದ   ಪಾದಳು   ಗುರಿಯಿರದ   ದಾರಿಗಳು ನಡೆನಡೆದು   ಧಣಿದ   ಪಾದಚಾರಿಗಳೆಷ್ಟೊ ಮರಳ   ಮೇಲ್ಗುರುತುಗಳು   ದಿಕ್ಸೂಚಿ   ಕುರುಹುಗಳು ಕೈ   ಬೀಸಿ   ಕರೆಯುತಿಹ   ಹೆಜ್ಜೆ   ಬಗೆಯು ನಡೆಯಬೇಕೇನು   ಇದನು   ಅನುಸರಿಸಿ   ನಾವುಗಳು ಹೋಗಿಸೇರುವುದಿದೆಲ್ಲಿ   ಅಜ್ಞಾತವು ಕಾಯುತಿಹೆ   ಅಲೆಅಲೆಯು   ಮರಮರಳಿ   ಮರುಕಳಿಸಿ ಅಳಿಸಿಹಾಕಲು   ಗುರುತು   ಕುರುಹಿಲ್ಲದೆ ಮಾಯವಾದವೊ   ಹೆಜ್ಜೆ   ಅದಾವುದನು   ನಾ   ಹಿಡಿದೆ ಏನನು   ಅನುಸರಿಸಿ   ಇಡಲಿ   ನನ್ನ   ಹೆಜ್ಜೆ ದೃಡದಿ   ಮುಂದಿಡ ಬೇಕು   ಛಲದಿ   ನಾ   ದೃತಿಗೆಡೆದೆ ನನ್ನ   ಹೆಜ್ಜೆಯ   ಗುರುತು   ಇನ್ನಿತರಗೆ ತಿಳಿಯದಾ   ಪಥ   ತೋಚದಾ   ದಿಕ್ಕ   ಧಿಕ್ಕರಿಸಿ ಹೆಜ್ಜೆಯಿಡ   ಬೇಕೇನು   ಅದರಳಿವಿಗೆ ?...

Hole in one - Kishan

Image
 A Golfing friend of mine from Eagleton, Kishan (Srikrishna) penned this nice Hole in one poem in kannada. Publishing this with his permission.  🔊Click here for Audio recitation ಇದು ಮೂರು ಹೊಡೆತದಾಟ। ಟೀ ಬಾಕ್ಸ್ ಗೆ ಹೋದ ಕಿಟ್ಟ। ಬಗ್ಗಿ ಚುಚ್ಚಿ ಚಿಕ್ಕ ಟೀಯ ನೆಟ್ಟ। ಚಂಡು ಒಂದು ಚಂದ್ರ ಪುಟ್ಟ। ಆ ಚಂಡನದರ ಮೇಲೆ ಇಟ್ಟ॥ ರಂದ್ರ ೨೦೦ ಯಾರ್ಡಿಗೆ। ಕಣ್ಣು ಬಿತ್ತೈರನ್‌ ಆರಿಗೆ। ಕಾಲಗಲಿಸಿ ಧೀರ ನಿಂತ। ಹೊಡೆದ ಬಹು ವಿಶ್ವಾಸದಿಂದ। ತೇಲಿ ಹಾರಿಸಿದಾ ಚಂಡ॥ ಗ್ರೀನ್ಗೆ ಬಿದ್ದು ರಭಸದಿಂದ। ರಂದ್ರ ದಾಟಿ ಮೆಲ್ಲ ನಿಂತು। ಮರುಕಳಿಸಿ ಹೊರಳಿ ಬಂತು। ಮೆಲ್ಲ ರಂದ್ರದೊಳಗೆ ಬಿದ್ದು! 'ಹೋಲ್-ಇನ್-ಒನ್' ಆಯಿತು! ನೆರೆದ ಕ್ಯಾಡಿ ಕೇಕೆಗೆಗೆ  ನಮ್ಮ ಕಿಟ್ಟ ಕಿರುನುಗೆ,  ಕಣ್ಣೀರು ತುಂಬಿಬಂತು ಆನಂದ ಬಾಷ್ಪದೊಂದಿಗೆ॥ - ಶ್ರೀಕೃಷ್ಣ

ಫೋಟೋ

Image
  🔊 Click here for an audio recitation ಹಳೆಯ   ಫೋಟೋ   ನೋಡುತ್ತಿದ್ದೆ ಬಾಲ್ಯ ,  ಹರಯ ,  ಯೌವನಗಳ ಹಳೆಯ   ಫೋಟೋ   ನೋಡುತ್ತಿದ್ದೆ॥ ಫೋಟೋದಲ್ಲಿನ   ಆ   ಕಣ್ಗಳು ಅದೆಶ್ಟು   ಹೊಳಪು   ಅದೆಂತಹ   ನಗು। ಕಪಟವಿಲ್ಲದ   ಮುಗ್ಧತೆಯು ಹಳೆಯ   ಫೋಟೋ   ನೋಡುತ್ತಿದ್ದೆ॥ ನೋಡಿದೆ   ನಾನು   ನಲಿವ   ಬಾಲ್ಯವ ತುಂಟ   ನಗುವು   ಹುರುಪು   ಬಹಳ। ಫ್ರೇಮಿನಿಂದಾಚೆ   ಜಿಗಿದುಬಿಡುವ ಹಳೆಯ   ಫೋಟೋ   ನೋಡುತ್ತಿದ್ದೆ॥ ಚಿಗುರು   ಮೀಸೆ   ಅಛಲ   ಛಲವು ದಿಟ್ಟತನದ   ಯುವಕನೊಬ್ಬ। ಕ್ಯಾಮರವನ್ನೇ   ಸುಡುವಂತಿದ್ದ   ಹಳೆಯ   ಫೋಟೋ   ನೋಡುತ್ತಿದ್ದೆ॥ ನೋಡ   ನೋಡುತ್ತ   ನಿಟ್ಟುಸಿರ   ಬಿಟ್ಟೆ ಕನ್ನಡಕವ   ಸರಿಸಿ   ತೆಗೆದೆ। ಒರೆಸಿ   ಮತ್ತೆ   ತಗುಲಿಹಾಕಿದೆ ಈಗೆಲ್ಲ   ಸುತ್ತ   ಬಹಳ   ಸ್ಪಷ್ಟ॥ ನನ್ನ   ಎದುರು   ಕನ್ನಡಿಯೊಂದು ನಾನದನು   ನೋಡಿರಲಿಲ್ಲ। ತಟ್ಟನೆ   ಕಂಡಿತೊಂದು   ಮುದಿ   ಮುಖವು ಬೆಚ್ಚಿ   ಬಿದ್ದು   ನೋಡಿದೆ   ಅವನ॥ ಅವನೆ   ನಾನೆಂದು   ತಿಳಿದೊಡೆ ನೋಡಿದೆ   ನಾ   ಚದುರಿದಾ ...