ಗಾಲ್ಫ್
ಗಾಲ್ಫ ಆಟವಯ್ಯ ಇದುವು ಯೆನ್ನ ಕೈಲಿಹುದು ಚೆಂದದಾಚಂಡು ಹಂಸವರ್ಣದ ಗುಳಿಗಳಾ ಚಂಡು ನೀರವನೆಂದೆನಿಸುವ ನಿರ್ಹಾನಿಕ ತೋರುವ ಪುಟ್ಟದಾದ ಈ ಮದ್ದು ಗುಂಡು ಗಾಲ್ಫ ಆಟವಯ್ಯ ಇದುವು ಮೂರ್ತಿ ಚಿಕ್ಕದಾದರೂ ತಿಳಿಯಲ್ಲಿಲಿದರ ಕೀರ್ತಿ ಬಿದ್ದೆ ನಾನದರ ಬಲೆಗೆ ತೊಳಲುತಿರುವೆ ಅದರಡಿಗೆ ಗಾಲ್ಫ ಆಟವಯ್ಯ ಇದುವು ಜೀವಕಿಲ್ಲ ಸಮದ ತಿಟ್ಟ ಜಿಗಿದೆ ಆಡಲಿದರ ಆಟ ಸಂಮ್ಯಮವಾ ಹಾಳು ಮಾಡಿ ಸಂಪತ್ತಿನ ಮೂಟೆ ಕರಗಿಸಿದ ಗಾಲ್ಫ ಆಟವಯ್ಯ ಇದುವು ಅಳಿಸಿ ಅಣಕಿಸೆನ್ನ ಅದುವು ಕೆಟ್ಟಬೈಗಳಾಡಿಸುತ್ತ ನನ್ನನಾನು ತುಚ್ಚಗೊಳಿಸಿ ನನ್ನ ಅಂತ್ಯ ನಾನು ಬಯಸೆ ತಿಳಿಯಹೇಳಿತು ಇದುವೆ ಪಾರ ಹೊಡೆದರೆ ನಾನು ನೆಟ್ಟ ನೇರ ಚಿಕ್ಕ ಚಂಡ ಚೆಂಡಾಡುವುದು ಸುಲಭವೆಂದೆ ಚಂಡು ಚಂಡೆಹಿಡಿದು ಆಗಿಹುದು ಭಂಡು ನನ್ನ ಬಯಕೆ ಬಂಡೆಯಾಗಿ ಸ್ವಂತ ಮಂಡೆ ಚಂಡಿಗಾಗಿ ತನ್ನ ಬಯಕೆ ತೀರಿಸುವುದು ...