Posts

ಗಾಲ್ಫ್‌

Image
ಗಾಲ್ಫ     ಆಟವಯ್ಯ   ಇದುವು ಯೆನ್ನ   ಕೈಲಿಹುದು   ಚೆಂದದಾಚಂಡು ಹಂಸವರ್ಣದ   ಗುಳಿಗಳಾ   ಚಂಡು ನೀರವನೆಂದೆನಿಸುವ   ನಿರ್ಹಾನಿಕ   ತೋರುವ ಪುಟ್ಟದಾದ   ಈ   ಮದ್ದು   ಗುಂಡು ಗಾಲ್ಫ     ಆಟವಯ್ಯ   ಇದುವು ಮೂರ್ತಿ   ಚಿಕ್ಕದಾದರೂ ತಿಳಿಯಲ್ಲಿಲಿದರ   ಕೀರ್ತಿ ಬಿದ್ದೆ   ನಾನದರ   ಬಲೆಗೆ ತೊಳಲುತಿರುವೆ   ಅದರಡಿಗೆ ಗಾಲ್ಫ     ಆಟವಯ್ಯ   ಇದುವು ಜೀವಕಿಲ್ಲ   ಸಮದ   ತಿಟ್ಟ ಜಿಗಿದೆ   ಆಡಲಿದರ   ಆಟ ಸಂಮ್ಯಮವಾ   ಹಾಳು   ಮಾಡಿ ಸಂಪತ್ತಿನ   ಮೂಟೆ   ಕರಗಿಸಿದ ಗಾಲ್ಫ     ಆಟವಯ್ಯ   ಇದುವು ಅಳಿಸಿ   ಅಣಕಿಸೆನ್ನ   ಅದುವು   ಕೆಟ್ಟಬೈಗಳಾಡಿಸುತ್ತ ನನ್ನನಾನು   ತುಚ್ಚಗೊಳಿಸಿ   ನನ್ನ   ಅಂತ್ಯ   ನಾನು   ಬಯಸೆ ತಿಳಿಯಹೇಳಿತು   ಇದುವೆ   ಪಾರ ಹೊಡೆದರೆ   ನಾನು   ನೆಟ್ಟ   ನೇರ ಚಿಕ್ಕ   ಚಂಡ   ಚೆಂಡಾಡುವುದು   ಸುಲಭವೆಂದೆ ಚಂಡು   ಚಂಡೆಹಿಡಿದು   ಆಗಿಹುದು   ಭಂಡು ನನ್ನ   ಬಯಕೆ   ಬಂಡೆಯಾಗಿ   ಸ್ವಂತ   ಮಂಡೆ ಚಂಡಿಗಾಗಿ   ತನ್ನ   ಬಯಕೆ   ತೀರಿಸುವುದು ...

ಬಾಲ್ಯ

Image
  ಬಾಲ್ಯ ಎಲ್ಲಿ   ಕಳೆದು   ಹೋದವೋ   ಆ   ಕಳೆದ   ದಿನಗಳು ಮರುಕಳಿಸಿ   ಬಾರದೇಕೊ ಆ   ಸಿಹಿಯ   ಕ್ಷಣಗಳು ಬಣ್ಣ   ಹಚ್ಚಿ ,  ಹೋಲಿ   ಎರೆಚಿ ಸೌದೆ   ಕದ್ದು ,  ಕಾಮನುರಿಸಿ ಬುಗುರಿ ,  ಗಿಲ್ಲಿದಾಂಡಲಾಡಿ ಗಾಳಿ   ಪಟವ   ಹಾರಿಬಿಟ್ಟ ಎಲ್ಲಿ   ಕಳೆದು   ಹೋದವೋ   ಆ   ಕಳೆದ   ದಿನಗಳು ಮರುಕಳಿಸಿ   ಬಾರದೇಕೊ ಆ   ಸಿಹಿಯ   ಕ್ಷಣಗಳು ಬೀದಿ   ಸುತ್ತಿ ,  ಕ್ರಿಕೆಟ್ಟಾಡಿ ಬಣ್ಣದ   ಐಸ್ಕ್ರೀಮು   ಚೀಪಿ ನಾಲಿಗೆಯನು   ಬಣ್ಣಗೊಳಿಸಿ ನೆಲ್ಲಿಗೆ   ಬಾಯಿಟ್ಟು   ನೀರು   ಕುಡಿದ ಎಲ್ಲಿ   ಕಳೆದು   ಹೋದವೋ   ಆ   ಕಳೆದ   ದಿನಗಳು ಮರುಕಳಿಸಿ   ಬಾರದೇಕೊ ಆ   ಸಿಹಿಯ   ಕ್ಷಣಗಳು ಮರಕೋತಿ ,  ಐಸ್ಪೈಸ್‌ ಜೂಟಾಟ ,  ಕಳ್ಳ   ಪೋಲಿಸ್‌ ಬುಗುರಿ   ಗುನ್ನ ,  ಗೋಲಿಯಾಟ ಕತ್ತರಿ   ಸೈಕಲ್ಲು   ಕಲಿತ   ಎಲ್ಲಿ   ಕಳೆದು   ಹೋದವೋ   ಆ   ಕಳೆದ   ದಿನಗಳು ಮರುಕಳಿಸಿ   ಬಾರದೇಕೊ ಆ   ಸಿಹಿಯ   ಕ್ಷಣಗಳು ಹರಿಕತೆ  , ಬೀದಿ   ನಾಟಕಗಳು ಗಣೇಶೋತ್ಸವದ   ಆರ್ಕೆಸ್ಟ್ರಾಗಳೋ ಓಮ್ಮೊ...

ಯುಗಾದಿ

Image
  ಯುಗಾದಿ ಈ   ಯುಗಾದಿಗುದ್ಭವಿಸು   ನವಮಾನವ ನವ   ಚೇತನ , ನವೋಲ್ಲಾಸ ನವನವೀನತೆಯಿಂದ ಹೊಸ   ಬುನಾದಿಯೊಂದಿಗೆ ಹೊಸ   ಸೃಷ್ಠಿಯತಾ ಈ   ಯುಗಾದಿಗುದ್ಭವಿಸು   ನವಮಾನವ ನನ್ನ   ನನ್ನವರನೆಲ್ಲ   ಮರೆತು ನಿನ್ನ   ನಿನ್ನವರನೆಲ್ಲ   ತೊರೆದು ಹೊಸ   ಬಾಳ   ಬಾಗಿಲಿಗೆ   ಬಂದು   ನಿಂತು ನನ್ನ   ನಿನ್ನವರನೆಲ್ಲ   ಒಂದಾಗಿ   ಕಾಣುತ ಆಹ್ವಾನಿಸು   ಸವಿಯಲು   ನವ   ಸ್ವಾಧವ ಈ   ಯುಗಾದಿಗುದ್ಭವಿಸು   ನವಮಾನವ ಬೇವಿನ   ಕಹಿ   ಕಡು   ಸತ್ಯ ಬೆಲ್ಲದೊಡೆ   ನೀನದ   ಸವಿ ಸಮವಿರಲಿ   ಜೀವನದೊಳು ಸಂಯಮ   ಸಾಮರಸ್ಯೆತೆಯು ಜೀವನದೊಳು   ಜೀವಿಗಳೊಡೆ ಜೀವಿತದ   ಹುರುಪನು   ತಾ ಈ   ಯುಗಾದಿಗುದ್ಭವಿಸು   ನವಮಾನವ -  ನಾ   ಶ್ರೀ   ಮೋ Let’s be born at the dawn  of this ever renewing eon  With energy & vigour to go New strength found  Foundations laid strong  Forgetting self and my selfish mine Rejecting you, your vain & pelf Embracing you to make a part of me Setting aside divisions & to be free Bi...

ಪುಡಾರಿ

Image
  ಆಳುವವರು ಆಳುವವರು   ಬೇಕೆಮಗೆ   ಆಳುವವರು ಆಂಗ್ಲರು   ತೊಲಗಿ   ಸ್ವಾತಂತ್ರ   ಬಂದರೂ ಆಳುವವರು   ಬೇಕೆಮಗೆ   ಆಳುವವರು ಗುಲಾಮಗಿರಿ   ಮಾಡಿ  ‌ ಸ್ವಾತಂತ್ರದ   ಛಲಮರೆತು ಆಳಾಗ   ಬಯಸಿ   ಆಳುವವರ   ಹಿಂಬಾಲಿಸಲು ಆಳುವವರು   ಬೇಕೆಮಗೆ   ಆಳುವವರು ಐದುವರುಷಕ್ಕೊಮ್ಮೆ   ದರುಶನವನೀವ ಐದುವರುಷದಲಿ   ಮ್ಯೈದು   ಕೊಬ್ಬುವ ಆಳುವವರು   ಬೇಕೆಮಗೆ   ಆಳುವವರು ಪಾದಯಾತ್ರೆ ,  ಭಾಷಣಗಳ   ಮಾಡಿ ಇನ್ನೈದು   ವರುಷ   ಪೂಜಾರ್ಹನೆಂಬ ಆಳುವವರು   ಬೇಕೆಮಗೆ   ಆಳುವವರು ಆಳಾಗುವೆ   ನಾನೆಂದು   ನಕ್ಕು   ನುಡಿದು ಚಿಕ್ಕ   ರೊಕ್ಕವನ್ನು   ನಮಗೆ   ನೆಕ್ಕಿಸುವ ಆಳುವವರು   ಬೇಕೆಮಗೆ   ಆಳುವವರು ಕೆಂಬಣ್ಣ   ದೀಪ   ಹೊತ್ತು   ಸೈರನ್ನಿನ   ಕಹಳೆಯೂದಿ ಸರಕಾರದ   ಕಾರಿನಲ್ಲಿ   ರಕ್ತಕಾರುತ್ತ   ರಂಜಿಸುವ ಆಳುವವರು   ಬೇಕೆಮಗೆ   ಆಳುವವರು ಯೋಜನೆಗಳೆಂದು   ದುರಾಲೊಚನೆ   ಮಾಡಿ ಕಪ್ಪು   ಹಣವನಿಲ್ಲಿ   ಅಲ್ಲಿ   ಕೂಡಿಡುವ ಆಳುವವರು   ಬೇಕೆಮಗೆ   ಆಳುವವರು ನಮ್ಮಂತಹ   ಪ್ರಜೆಗಳಿಗೆ   ಪ್ರಭುವಾಗಿ   ಮೆರೆಯಲು ಪ...