Posts

I, me & my Biking

Image
My story about my passion for biking Click here for video link A rider’s dream Click here 👇🏽 for video   Ride through the forest Click here 👇🏽 for video The siblings breakfast ride Click here 👇🏽 for video Speed ride on NICE road Click here 👇🏽 for video Yeh mere humsafar Click here 👇🏽 for video

ಕವನ

Image
  🔊Audio link ನಾ   ತಿಳಿಯದೆ   ಬರೆವೆನೇನ್ಕವನವನು ಅದೆ   ಹೊರ   ಹೊಮ್ಮುವುದೋ ಅಂತರಾಳದ   ತುದಿತ   ಉಕ್ಕುವುದೊ ನಾ   ತಿಳಿಯದೆ   ಬರೆವೆನೇನ್ಕವನವನು ? ಮನದ   ಭಾವನೆಗಳ   ಹೊರದೂಡಲಿಚ್ಚೆಯು ಒಮ್ಮೊಮ್ಮೆ   ಝರಿಯಂತೆ   ಹರಿಯುವುದು ದುಮುಕುವುದು   ಎತ್ತರದ   ಜಲಪಾತದಂತೆ ನಾ   ತಿಳಿಯದೆ   ಬರೆವೆನೇನ್ಕವನವನು ? ಪದ   ವಾಕ್ಯ     ಜೋಡಿಸುವ   ಚಾಣಾಕ್ಷ ವ್ಯಾಕರಣ   ಛಂದಸ್ಸು   ಪ್ರಾಸಗಳ   ಪರಿಹಾಸ ಭಾವನೆ   ಅನಿಸಿಕೆಗಳನಿವಾರ್ಯ   ಅರಿವುಗಳು ನಾ   ತಿಳಿಯದೆ   ಬರೆವೆನೇನ್ಕವನವನು ? ಸುರಿವುದು   ಜಿನುಗು   ಮಳೆಯತೆರೆ   ಎಡೆಬಿಡದೆ ಕರಗಲಾರವು   ಆ   ಕಪ್ಪು   ಮೋಡಗಳು ಅದಾವ   ಕಡಲ್ಲಿಂದ   ಏನ   ಹೊತ್ತು   ತಂದಿಹುದೋ ನಾ   ತಿಳಿಯದೆ   ಬರೆವೆನೇನ್ಕವನವನು ? ಬಿಳಿಯ   ಹಾಳೆಗೆ   ಕಪ್ಪು   ಶಾಯಿಯಾ   ಮಚ್ಚೆಗಳು ಇಚ್ಚಿಸದೆ   ಹೊರಚೆಲ್ಲಿದಾ   ಸತ್ಯಗಳು ಮನತೆರೆದ   ಜಾಣನಾ   ವಾಕ್ಯಗಳು ನಾ   ತಿಳಿಯದೆ     ಬರೆದೆನೇನ್ಕವನವನು। - ನಾ ಶ್ರೀ ಮೋ

ತ್ರೇತಾಯುಗಪುರುಷ

Image
  ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ ಪಿತೃವಾಕ್ಯಕೆ ಮಣಿದ ಮರ್ಯಾದೆ ಪುರುಷ ಸತಿ ಭ್ರಾತೃ ಮಾತೃಗಳ ಸಂಕಷ್ಟದಲಿರಿಸಿ ಪ್ರಜಾಪಾಲನೆಯಿಂಪಲಾಯನಗೈದ ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ ರಾಜ್ಯವನಾಳುವನೊಲ್ಲೆಂದೆನುತ ಕಾಡಿಗೋಡಿದೆ ನೀನೆಲ್ಲ ತ್ಯಜಿಸಿ ಪಾದುಕೆಗಳನಿತ್ತು ಪರೋಕ್ಷದಿ ಆಳ್ದೆ ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ ಕಪಿಯೀರ್ವರ ಜಗಳದೊಳು ನೀ ಜಿಗಿದು ಹಾತೊರೆದು ಸತಿಯ ಹುಡುಕಲು ಹವಣಿಸಿ  ಕೊಂದೆನೀನಡಗಿ ವಾಲಿಯನು  ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ ಸತಿಯ ರಕ್ಷಣೆ ಎಂದು  ರಾಕ್ಷಸ ರಾವಣ ಕೊಂದೆ ಶಂಕಿಸಿ ಸತಿಯನಗ್ನಿ ಸಾಕ್ಷಿಯಿರಿಸಿ ಪಡೆದೆ ಇರಲೆಲ್ಲ ತತ್ವಗಳು ನಿನ್ನ ತ್ರೇತಾಯುಗಕೆ ಆಲಿಸಿ ಓರ್ವ ಅಗಸನ ಮಾತುಗಳ ತ್ಯಜಿಸಿದೆ ತಾಯಾಗುವ ಸತಿಯ ಚಿನ್ನ ಪುತ್ತಳಿಯ ಪಕ್ಕ ಇರಿಸಿ ಅಶ್ವಮೇಧಕೆ ಇರಲೆಲ್ಲ ಜಾಣತನ ನಿನ್ನ ತ್ರೇತಾಯುಗಕೆ - ನಾ ಶ್ರೀ ಮೋ ಇದು ಅವಹೇಳನೆಯಲ್ಲ - ಕ್ಷಮೆಯಿರಲಿ.  ಒಬ್ಬ ವ್ಯಕ್ತಿಯ ವಿಶ್ಲೇಷಣೆ. ಹೀಗೇಕೆ ಎಂಬ ಕುತೂಹಲ!

ಇದೇನುಗಾದಿ?

Image
  🔊Audio link ಕಾಲಕೆಲ್ಲಿ   ಆದಿ   ಇಹುದೊ ,  ಎಲ್ಲಿಹುದೋ   ಅಂತ್ಯವು। ನಿತ್ಯ   ನೂತ ,  ಸತತ   ಉರುಳು ,  ಇದುವೆ   ಕಾಲ   ಚಕ್ರವು। ಮಾನದಂಡವಾವುದದು   ಕಾಲ   ಕಳೆದು   ಅಳೆವುದು। ದಿನವನೆಣಿಸಿ , ಋುತುವ   ಘಟಿಸಿ   ನಿಂತಿದೇ   ಯುಗಾದಿಯು॥ ವರುಷಕೆಲ್ಲ   ಬರುವುದೊಮ್ಮೆ   ಚಿಗುರೊಡೆವ   ಸತ್ಯವು। ಹಳೆದೆಲ್ಲ   ಮಾಸಿ   ಉದುರಿ ,  ಹೊಸದು   ಹೊಳೆದು   ಬರುವುದು। ಹಸಿರು   ಹಚ್ಚಿ   ಬಣ್ಣಕಟ್ಟಿ   ಮಾಡುವದದು   ಮೋಹಕ। ಇದಕೆ   ಹೆಸರನಿಟ್ಟು   ಸಂಭ್ರಮಿಸಿದೆ   ಇದೇ   ಇಂದುಗಾದಿಯು॥   ಮಾವ   ಕಿತ್ತೆ   ತೋರಣಕೆ   ತೋರಲೆನ್ನ   ಉತ್ಸವ। ಬೆಲ್ಲಕೆಲ್ಲ   ಬೇವ   ಬೆರಿಸಿಯುಂಡು   ಕಂಡೆ   ಸತ್ಯವ। ಕಷ್ಟಸುಖವು   ಬರುವುದೆಂದು   ಕಾಲ   ಚಕ್ರ   ಪಥದೊಳು। ಸಮಚಿತ್ತದಿ   ಸವಿಯಬೇಕು   ಇದೇ   ಮಂತ್ರ   ಯುಗಾದಿಯು॥ ಅಂತ್ಯವಿಲ್ಲ   ಆದಿಯಿಲ್ಲ   ನಡೆಯಲಿ   ಜೀವನದ   ಸಾರ್ಥವು। ಬೀಡು   ಬಿಟ್ಟು   ವಹಿವಾಟು   ನಡೆದು   ಸಾಗುವುದು   ಜೀವನಾಟವು। ಸೋಲು   ಗೆಲವು ...

ಯುವಕ

Image
  🔊Audio recitation of the Poem ಬೊಕ್ಕ ತಲೆ ಬಿಳಿಯ ಮೀಸೆ  ಸೋತ ಚರ್ಮ ನೋಡೆ ಮುದುಕ ನೋಡಿದವರಿಗೆಲ್ಲ ತಾತ ಮಾಮ ಇವನು ವಯಸ್ಸಿನಲ್ಲಿ ವಯೋವೃದ್ಧ ಮಿಂಚು ಕಣ್ಣು ಬಿಚ್ಚುನಗುವು ಪಾದರಸ ನಡಿಗೆ ಹುರುಪು ತುಂಬ ಒಡೆನಾಡಿದವರಿಗೆಲ್ಲ ಅಣ್ಣ ಗೆಳೆಯ ಇವನು ಮನದಲಿ ತರುಣ ಯುವಕ ಮುಗ್ಧ ಮನಸು ತುಂಟತನವು ಇವನಲಿಹುದು ಹವ್ಯಾಸ ಬಗೆಯು ವಾರ ಕೊನೆಗೆ ಬೈಕ್ ರೈಡು ಬೇಕು  ತೋಟವೇನು ಆಟೋಟವೇನು  ಟ್ರೆಕ್ಕೆಂದು ಶಿಖರಗಳಿಗೆ ಓಡುವವನು ಹಾಸ್ಯ ನಟನೆ ಹಾಡು ಹಾಸೆ ಕವನ ಮನನ ಅದರೆಲ್ಲ ಆಸೆ ಚಿಕ್ಕ ಮಗುವು ನುಡಿದು ನಲಿವ ಕಪಟವಿಲ್ಲ ತೆರೆದ ಹೃದಯ ಎಲ್ಲರೋಡನೆ ಇವನು ಬೆರೆವ ಇವನು ಕೂಡ ಪೆಟ್ಟು ತಿಂದ ಜೀವ ನೋಡಿ ಬಂದಿಹ ನೋವು ನಲಿವ ತಿಂದಿರುವನು ಇವನು ಬೆಲ್ಲ ಬೇವ ದುಃಖ ಭಯ ದುಗುಡವಿಹುದು ಎಲ್ಲರಂತವಿನೂ ನೋಡ ಬಿದ್ದು ಎದ್ದಿಹ, ಎದ್ದು ಬಿದ್ದಿಹ ಮೈಯ ಕೋಡವಿ ನಕ್ಕು ನಡೆದಿಹ ಗಾಯಗಳಿಹವು ಹಲವು ಮೈಮನ ಕುರುಹು ಅವಿತಿದೆ ಮುಸುಕಿ ಹುದುಗಿದೆ ತೋರಲಾರನು ಅವನೆಲ್ಲರೆದುರಿಗೆ ಹೂತು ಅವಗಳ ಮೇಲೆ ತಾನು ನಗೆಯ ಮುಖದ ಗೋರಿ ಕಟ್ಟಿಹ ಚರಮ ಶ್ಲೋಕ ಬರೆದು  ಹಾಡಿದ ಹೂವ ಗಿಡವನು ಮೇಲೆ ನೆಟ್ಟಿಹ ಹೂವ ನೋಡಿ ಇಂದು ನಲಿದಿಹ ಮುದುಕನಲ್ಲ ಯುವಕನಿವನು ಯುವಕನಲ್ಲ ಹಸುಳೆ ಇವನು ಘಂಟೆ ಮುಳ್ಳಿನ ಮೇಲೆ ಕುಣಿವನು ಕಾಲ ನಿಂತಿದೆ ಇವನಿಗಿಂದು  ಮುಂದೆ ಜಾಣ ನೆನೆವರು  ಧೀರ ಇವ ಸರದಾರನೆಂದು ⁃ ನಾ ಶ್ರೀ ಮೋ

Gandhi & relevance of Gandhism

Image
Mohandas Karamchand Gandhi There was a time when we were young and we were taught to revere Mohandas Karamchand Gandhi (aka Mahatma Gandhi) and he was almost God like to us.  I still remember seeing his photos hung in the houses just like you would hang a photo of the immeasurable number of Gods that we have or completely forgotten or about to be forgotten ancestors.  I look back with amusement that I was named as Mohan after this very great man (much to the insistence of my “Chitti pati”)   Over time, as young men, we read more about Gandhi. His experiments with Truth and his magical power of moving the masses. Some of them with amusement and many with seriousness that they deserved.  Somewhere down the line as we grew up, MG became more human and was fallible like you and me. He was prone to his own quirks and quixotic ways, or so we understood. His experiments with Bramhacharya or his obstinate way to make things happen or his Machiavellian ways to ease in Jawahar...

ಸಂಕ್ರಾಂತಿ

Image
  ಚಿತ್ರ   ಕೃಪೆ  -  ಅರವಿಂದ   ಶಾಸ್ತ್ರಿ  ( ಸುರಗೀ  -  ಕುಮಟ  /  ಕಡಲೇ  ಕಡಲ ತೀರ ) 🔊Audio Recitation of the Poem ಇಣುಕಿ   ನೋಡುತ್ತಿದ್ದ   ಆಗಸದಂಚಿದಿಂದಿವಾಕರ ಬೆಳಕೀಯಬೇಕೆಂದು   ಮೈಮುರಿದು   ಮೇಲೇಳುತ ಚೆಲ್ಲುತ   ತನ್ನ   ಚೆಲುವ   ಕಿರಣಗಳ   ಜೀವ   ಜೀವಕೆ   ಸಾರ ಸುತ್ತಲಿನಾ   ಕತ್ತಲ   ಕರಗಿಸಿ   ದುಗುಡ   ಮರೆಮಾಚಲೆಂದೋ ಬೆಳಕಿತ್ತು   ಕಣ್ತೆರಿಸಿ   ಸಂಚನೆಯ   ಧೈರ್ಯ   ನೀಡಲೆಂದೋ ಬೆಳಗಾಯಿತೆಂದು   ಚಿಲಿಪಲಿಗುಟ್ಟಿದವು   ಖಗಲೋಕದ   ಚರ ಮುದುಡಿದಾ   ಪುಷ್ಪಗಳು   ಮೊಗವರಳಿಸಿ   ನಕ್ಕಿತು   ನೋಡ ಪೈರ   ತೆನೆಗಳು   ತೂಗಿ   ಉಣಬಡಿಸಲು   ನಿಂತವು   ಸಾಲುಸಾಲಾಗಿ ಸಾಗರಕೆ   ದೋಣಿಯ   ನೂಕಿದನು   ನಾವಿಕನು  ನವಿರಾಗಿ   ಸಂಕ್ರಮಿಸಿದ   ಸೂರ್ಯ   ಸಂಭ್ರಮದಿ   ಮಕರಕ್ಕೆ   ಮರುಕಳಿಸಿ ಉತ್ತರೋತ್ತರದ   ಉನ್ನತಿ   ಪುಣ್ಯ   ಕಾಲಕೆ   ಜಾಣ  ಮಂಗಳ     ನಾಂದಿ .   ಶಿಶಿರದ   ಇಬ್ಬನಿಯು   ಕರಗದೆಯೆ   ಮಂಜಾಗಿ ಮಾಗಿಯ   ಬಿ...

ಮೊದಲೆಲ್ಲಾ ಹೊಸತು

Image
  ಬಿಟ್ಟಾಯಿತು ಬಿಗುಮಾನದಿ ಹಳೆದೆಂದು ಹಸನಾಯಿತು ಹೊಸೆದೆಲ್ಲ ಹೊಸತು ಬಣ್ಣ ಬಳಿಸಿ ಹೊಳಪನು ಥಳಥಳಿಸಿ ಮೆರಗು ಮೆತ್ತಿ ತಿರುಗಾಡುತಲಿ ಮೊದಮೊದಲೆಲ್ಲಾ ಹೊಸತು॥ ನಿದ್ರಾದೇವಿ ಮಡಿಲಿನ ಕೂಸೆ ಕನಸುಗಳಿವು ಕಣ್ಣಳರಳಿಸಿ ನೋಡೆ ಹಳೆಯ ನೆನಪುಗಳು ಹೊಸದವತರಿಸಿ ನಿತ್ಯನೂತನವಿದೆಂದೆನಿಸಿ ಮೊದಮೊದಲೆಲ್ಲಾ ಹೊಸತು॥ ನಿನ್ನೆ ಮೊನ್ನೆಯದೆಂತೆಂದು ಗೊಣಗಿ ನಾಳೆಗಳ ರುಚಿಗಳಿಗಿಂದು ಒಣಗಿ ಜಾಣನು ತಾನೆಂದೆನುತ ಪೊಗಳಿ ಹೊಸದೆಂದೆನುತ ಹಳೆಯದೆಲ್ಲವ ತಳ್ಳಿ ಮೊದಮೊದಲೆಲ್ಲಾ ಹೊಸತು॥ - ನಾ ಶ್ರೀ ಮೋ

ನಡುವೆ

Image
  ಕಪ್ಪಲ್ಲ ಬಿಳುಪಲ್ಲ ಹೊಳಪು ಥಳಕುಗಳಿಲ್ಲ। ಕಂಡದ್ದು ನೋಡಿದ್ದು ಬೆಳಕು ಕತ್ತಲೆಯಲ್ಲ। ತಿಂದ್ದು ಕುಡಿದದ್ದು ಸಿಹಿ ಖಾರಗಳಲ್ಲ। ಮಿಶ್ರಿತ ಮಿಲನವು ಅತಿರೇಕ ಬೇಕಿಲ್ಲ॥ ನೀನಲ್ಲ ನಾನಲ್ಲ ನನ್ನನಿನ್ನದೇನಿಲ್ಲ ಬೋಳಲ್ಲ ಹಸಿರಲ್ಲ ಸುತ್ತಲಿನ ಮರವೆಲ್ಲ ಕಾಡಲ್ಲ ಕಡಲಲ್ಲ ಬರಡಲ್ಲ ಗೊರಡಲ್ಲ ಮಿಶ್ರಿತ ಮಿಲನವು ಅತಿರೇಕ ಬೇಕಿಲ್ಲ॥ ದೇವಾಮೃತ ದಾನವರ ವಿಶವಲ್ಲ ಗೋಚರನೋ ಅಗೋಚರನೂಅಲ್ಲ ನಾಸ್ತಿಕ ಪರಮ ವೈದಿಕನೂ ಅಲ್ಲ ಮಿಶ್ರಿತ ಮಿಲನವು ಅತಿರೇಕ ಬೇಕಿಲ್ಲ॥ ಸಮಚಿತ್ತದಿ ನೋಡಿ ಅನಿಸ್ಚಿತವಿದೆಲ್ಲ ಮಾಡದಿರೆ ಅಪೇಕ್ಷೆ ಉಪೇಕ್ಷಗಳಿದಕೆಲ್ಲ ತಿಳಿದಿದ್ದು ಇದೊಂದು ತಿರುತಿರುವಾಗಾಣ ನಡುವೆ ಅಛಲದಿ ನಿಂತವನೆ ನಿಜದೀ ಜಾಣ॥

ಜಾತ್ರೆ

Image
  ಜಾತ್ರೆ ಮನದೊಳಗಿನ   ಜಾತ್ರೆ   ನೆನಪುಗಳ   ಮೆರವಣಿಗೆ ಗಿರಗೀಟಲೆಯಂತೆ   ಗಿರಗಿರನೆ   ತಿರುಗಿ ಭಯೋನ್ಮಾದಗಳ   ಚೆಲ್ಲಾಟವಾಡುತ್ತ   ನಗಿಸಿ   ಅಳಿಸಿಹುದು   ಚೀರಿ   ಕುಳಿತಿಹೆ   ನಾನು ಸುತ್ತು   ಮುಗಿಯಲಿ ,  ಹೀಗೇ   ಓಡುತಲಿರಲಿ   ಎಂದೆನುತ ಕನವರಿಸಿ   ಬೀಳುತ್ತಿದೆ   ಕನಸಿನಾ   ಮೆರವಣಿಗೆ   ಮನದಲ್ಲಿನ   ಜಾತ್ರೆ ಬಣ್ಣ   ಪೀಪಿಗಳು   ಚೀರಿ   ಕೂಗುತಲಿದೆ ಬೇಲೂನನುಜ್ಜಿದ   ಕಿರ್ರು   ಕಿರ್ರಿನ   ಕರೆಯು ಕಿವಿ   ಮುಚ್ಚುವ   ತವಕ ,  ತೆರೆದು   ಕೇಳುವಾ   ಬಯಕೆ ಹಿಂಸೆ   ಹಿತಗಳ   ಉಯ್ಯಾಲೆಯಾಡುತಿದೆ ಹರಿದು   ಬರುತಿದೆ   ಕನಸಿನ   ಮೆರವಣಿಗೆ   ಮನದಲಿನ   ಜಾತ್ರೆ ಬೆಂಡು   ಬತ್ತಾಸುಗಳು   ಬಣ್ಣ   ಹಚ್ಚಿದ   ಸಿಹಿಯು ಹೊಲಸು   ಗಲೀಜುಗಳ   ನಡುವೆ   ಕೈ   ಬೀಸಿ   ಕರೆಯುತಿದೆ ತಿನ್ನಬೇಕೆನ್ನುವಾಸೆ   ತಿನ್ನಬಾರದೆಂಬಾ   ತಿಳಿವು ಮನದಿ   ಗುದ್ದಾಡುತಿದೆ   ನನ್ನ   ಬೇಕು   ಬೇಡಗಳು ಪುಟಿದೆದ್ದು   ಬರುತಿದೆ   ಕನಸಿನ   ಮೆರವಣಿಗೆ   ಮನದಲಿನ   ಜಾತ್ರೆ ಅದ...