Posts

ಮರೆವು

Image
🔊 Click here for Audio recitation of the Poem   ಅದೆನಿತು   ದಿನಗಳಾಯಿತು   ಮನೆಯ   ತೊರೆದು ? ಮನದಳಿಸಿಹೋಯಿತೆ   ಹಿಂದಿರುಗುವ   ಹಾದಿ   ಮರೆತು॥ ಇದ್ದ   ಊರು   ಹಳೆತಾಗಿ   ಹೊಸದೆನಿಸದೆ। ಬಿದ್ದಿರುವ   ಜಾಗದಲಿ   ಜಢವಾಗಿ   ಮೈಯೊರಗಿ। ಮುಂದಿನದಕೆ   ಚಿಂತಿಸದೆ   ಇಂದಿನದ   ಮೆಲಕುತ್ತ। ಮನೆಯ   ಮರೆತು   ಇಲ್ಲೇ   ನಾ   ತೂಕಡಿಸುತ। ಅದೆನಿತು   ದಿನಗಳಾಯಿತು   ಮನೆಯ   ತೊರೆದು ? ಮನದಳಿಸಿಹೋಯಿತೆ   ಹಿಂದಿರುಗುವ   ಹಾದಿ   ಮರೆತು॥ ಅಲ್ಲಿರುವ   ಭಂದು   ಅಲ್ಲಿದ್ದ   ಮಿತ್ರನ   ಮರೆತು। ಇಲ್ಲಿಯ   ಕ್ಷಣಕೆ   ಭಾಂದವ್ಯ   ಮೈತ್ರಿಯನು   ಬೆಳಸಿ। ಇದೆೇ   ಶಾಶ್ವತವೆಂದು   ಆನಂದದಿ   ಭ್ರಮಿಸಿ। ಕೆಲ   ಕಾಲ   ತಂಗುದಾಣವ   ನಿಜ   ವಿಳಾಸವೆಂದೆನಿಸಿ। ಅದೆನಿತು   ದಿನಗಳಾಯಿತು   ಮನೆಯ   ತೊರೆದು ? ಮನದಳಿಸಿಹೋಯಿತೆ   ಹಿಂದಿರುಗುವ   ಹಾದಿ   ಮರೆತು॥ ಭ್ರಮರ   ಹೂವೆಲ್ಲವನು   ಮನೆಯೆಂಬುವುದೆ ? ಗೂಡೆಲ್ಲಿಹುದೆಂದು   ತಿಳಿಯದೇನದಕೆ ? ಅಲೆಮಾರಿ   ಅರಸುತ್ತ   ಸಾಂತ್ವವನು   ಹುಡುಕುತ್ತ। ...

ಹೆಜ್ಜೆಗಳು

Image
  🔊 Click here for a video link to the recitation  https://youtu.be/j9feX27UyF8?si=oq_2xy214lRjRfkf ಇಟ್ಟ   ಹೆಜ್ಜೆಗಳೆಷ್ಟೋ     ನಡೆದ   ಪಥಗಳೆನಿತೋ     ಇಟ್ಟ   ಹೆಜ್ಜೆೆಯ   ಮೇಲೆ   ಮತ್ತಿಟ್ಟ   ಹೆಜ್ಜೆಗಳೆಷ್ಟೋ   ಸವೆದ   ಪಾದಳು   ಗುರಿಯಿರದ   ದಾರಿಗಳು ನಡೆನಡೆದು   ಧಣಿದ   ಪಾದಚಾರಿಗಳೆಷ್ಟೊ ಮರಳ   ಮೇಲ್ಗುರುತುಗಳು   ದಿಕ್ಸೂಚಿ   ಕುರುಹುಗಳು ಕೈ   ಬೀಸಿ   ಕರೆಯುತಿಹ   ಹೆಜ್ಜೆ   ಬಗೆಯು ನಡೆಯಬೇಕೇನು   ಇದನು   ಅನುಸರಿಸಿ   ನಾವುಗಳು ಹೋಗಿಸೇರುವುದಿದೆಲ್ಲಿ   ಅಜ್ಞಾತವು ಕಾಯುತಿಹೆ   ಅಲೆಅಲೆಯು   ಮರಮರಳಿ   ಮರುಕಳಿಸಿ ಅಳಿಸಿಹಾಕಲು   ಗುರುತು   ಕುರುಹಿಲ್ಲದೆ ಮಾಯವಾದವೊ   ಹೆಜ್ಜೆ   ಅದಾವುದನು   ನಾ   ಹಿಡಿದೆ ಏನನು   ಅನುಸರಿಸಿ   ಇಡಲಿ   ನನ್ನ   ಹೆಜ್ಜೆ ದೃಡದಿ   ಮುಂದಿಡ ಬೇಕು   ಛಲದಿ   ನಾ   ದೃತಿಗೆಡೆದೆ ನನ್ನ   ಹೆಜ್ಜೆಯ   ಗುರುತು   ಇನ್ನಿತರಗೆ ತಿಳಿಯದಾ   ಪಥ   ತೋಚದಾ   ದಿಕ್ಕ   ಧಿಕ್ಕರಿಸಿ ಹೆಜ್ಜೆಯಿಡ   ಬೇಕೇನು   ಅದರಳಿವಿಗೆ ?...

Hole in one - Kishan

Image
 A Golfing friend of mine from Eagleton, Kishan (Srikrishna) penned this nice Hole in one poem in kannada. Publishing this with his permission.  🔊Click here for Audio recitation ಇದು ಮೂರು ಹೊಡೆತದಾಟ। ಟೀ ಬಾಕ್ಸ್ ಗೆ ಹೋದ ಕಿಟ್ಟ। ಬಗ್ಗಿ ಚುಚ್ಚಿ ಚಿಕ್ಕ ಟೀಯ ನೆಟ್ಟ। ಚಂಡು ಒಂದು ಚಂದ್ರ ಪುಟ್ಟ। ಆ ಚಂಡನದರ ಮೇಲೆ ಇಟ್ಟ॥ ರಂದ್ರ ೨೦೦ ಯಾರ್ಡಿಗೆ। ಕಣ್ಣು ಬಿತ್ತೈರನ್‌ ಆರಿಗೆ। ಕಾಲಗಲಿಸಿ ಧೀರ ನಿಂತ। ಹೊಡೆದ ಬಹು ವಿಶ್ವಾಸದಿಂದ। ತೇಲಿ ಹಾರಿಸಿದಾ ಚಂಡ॥ ಗ್ರೀನ್ಗೆ ಬಿದ್ದು ರಭಸದಿಂದ। ರಂದ್ರ ದಾಟಿ ಮೆಲ್ಲ ನಿಂತು। ಮರುಕಳಿಸಿ ಹೊರಳಿ ಬಂತು। ಮೆಲ್ಲ ರಂದ್ರದೊಳಗೆ ಬಿದ್ದು! 'ಹೋಲ್-ಇನ್-ಒನ್' ಆಯಿತು! ನೆರೆದ ಕ್ಯಾಡಿ ಕೇಕೆಗೆಗೆ  ನಮ್ಮ ಕಿಟ್ಟ ಕಿರುನುಗೆ,  ಕಣ್ಣೀರು ತುಂಬಿಬಂತು ಆನಂದ ಬಾಷ್ಪದೊಂದಿಗೆ॥ - ಶ್ರೀಕೃಷ್ಣ

ಫೋಟೋ

Image
  🔊 Click here for an audio recitation ಹಳೆಯ   ಫೋಟೋ   ನೋಡುತ್ತಿದ್ದೆ ಬಾಲ್ಯ ,  ಹರಯ ,  ಯೌವನಗಳ ಹಳೆಯ   ಫೋಟೋ   ನೋಡುತ್ತಿದ್ದೆ॥ ಫೋಟೋದಲ್ಲಿನ   ಆ   ಕಣ್ಗಳು ಅದೆಶ್ಟು   ಹೊಳಪು   ಅದೆಂತಹ   ನಗು। ಕಪಟವಿಲ್ಲದ   ಮುಗ್ಧತೆಯು ಹಳೆಯ   ಫೋಟೋ   ನೋಡುತ್ತಿದ್ದೆ॥ ನೋಡಿದೆ   ನಾನು   ನಲಿವ   ಬಾಲ್ಯವ ತುಂಟ   ನಗುವು   ಹುರುಪು   ಬಹಳ। ಫ್ರೇಮಿನಿಂದಾಚೆ   ಜಿಗಿದುಬಿಡುವ ಹಳೆಯ   ಫೋಟೋ   ನೋಡುತ್ತಿದ್ದೆ॥ ಚಿಗುರು   ಮೀಸೆ   ಅಛಲ   ಛಲವು ದಿಟ್ಟತನದ   ಯುವಕನೊಬ್ಬ। ಕ್ಯಾಮರವನ್ನೇ   ಸುಡುವಂತಿದ್ದ   ಹಳೆಯ   ಫೋಟೋ   ನೋಡುತ್ತಿದ್ದೆ॥ ನೋಡ   ನೋಡುತ್ತ   ನಿಟ್ಟುಸಿರ   ಬಿಟ್ಟೆ ಕನ್ನಡಕವ   ಸರಿಸಿ   ತೆಗೆದೆ। ಒರೆಸಿ   ಮತ್ತೆ   ತಗುಲಿಹಾಕಿದೆ ಈಗೆಲ್ಲ   ಸುತ್ತ   ಬಹಳ   ಸ್ಪಷ್ಟ॥ ನನ್ನ   ಎದುರು   ಕನ್ನಡಿಯೊಂದು ನಾನದನು   ನೋಡಿರಲಿಲ್ಲ। ತಟ್ಟನೆ   ಕಂಡಿತೊಂದು   ಮುದಿ   ಮುಖವು ಬೆಚ್ಚಿ   ಬಿದ್ದು   ನೋಡಿದೆ   ಅವನ॥ ಅವನೆ   ನಾನೆಂದು   ತಿಳಿದೊಡೆ ನೋಡಿದೆ   ನಾ   ಚದುರಿದಾ ...

The Cruise Memoir

Image
  Indian “Gang” Relaxing at the cabin Balcony 🔊Click here for an Audio recitation Amid Baltic waves that gleam so blue, A cruise embarked with a joyous crew. From distant lands, we came in scores, Indian hearts, on foreign shores. A voyage grand, fourteen days to roam, Through Norway's fjords, a traveler's home. With laughter shared, a lively group, From New Zealand to Indian troupe. Australia's sun, UK's embrace, USA's charm, Germany's grace. Zimbabweans too we sailed, hearts intertwined, A union of cultures, beautifully combined. Bhagawan's touch, a guiding light, Crafting memories, day and night. Land excursions to lands unknown, Bergen's beauty, Tallin's charm shown. Olden's vistas, a scenic sight, Stravanger's allure, pure delight. Copenhagen's flair and grace, Helsinki's warmth, a friendly embrace. On the ship, we sang and played, Fun and laughter never swayed. Celebrating India's freedom on board, In a style on the High se...

ರಮ್‌ (Rum)

Image
  This parody was written on board the cruise ship MSC Fantasia. It was in response to an other parody sung by fellow travellers. After writing this, it was sung by same set of ladies, who did a splendid job of an impromptu singing, given the lyrics.  🔊 Press here for the Audio link ಕುಡಿಯಲು   ಎಂದೇ   ರಮ್ಮನು   ತಂದೆ ಬಾಯನು   ತೆರೆದು   ನಾ   ನಿಂದೇ ತೆರೆಯೋ   ಬಾಟಿಲನೂ   ರಮ್ಮಾ ತೆರೆಯೋ   ಬಾಟಿಲನೂ   ಮೋಡದ   ಮೇಲೆ   ಹೋಗಲು   ನಾನು ಕುಡಿಯುತ   ಸಾಗಿದೆ   ರಮ್ಮೂ   ಬೀರು ಮಾಣಿಕ್ಯ   ಲೊಟದೀ   ಆ   ಆ … ಗಾಜಿನ   ಲೊಟದೀ   ಉಷೆ   ತಂದಿಹಳೂ ತಾಮಸ   ಬೇಕಿನ್ನೂ   ಸ್ವಾಮೀ ತೆರೆಯೋ   ಬಾಟಿಲನು   ರಮ್ಮಾ  … ಓಗರೂ   ಚೆನ್ನ   ಕಲರೂ   ಚೆನ್ನಾ ನಿನ್ನಾಸರೆಯೇ   ಬಾಳಿಗೆ   ಚೆನ್ನ ನೀ   ನನ್ನ   ಒಂದು   ಪೆಗ್ಗಾದರೂ   ಚೆನ್ನ ಸ್ವೀಕರಿಸುವೆ   ನಿನ್ನಾ … ಸ್ವಾಮಿ ತೆರೆಯೋ   ಬಾಟಿಲನು   ರಮ್ಮಾ  … ಕುಡಿಯಲು   ಎಂದೇ   ರಮ್ಮನು   ತಂದೆ ಬಾಯನು   ತೆರೆದು   ನಾ  ...